ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ತಾಯಿಯನ್ನ ಮನೆಗೆ ಕಳಿಸದ ಮಾವನ ಮೇಲೆ ಮಚ್ಚು ಬೀಸಿದ ಅಳಿಯ!

ಚಿಕ್ಕಮಗಳೂರು: ತನ್ನ ತಾಯಿಯನ್ನ ಮನೆಗೆ ಕಳಿಸದಿದ್ದಕ್ಕೆ ಕೋಪಗೊಂಡು ಮಾವನ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವಿಜಯಲಕ್ಶ್ಮಿ ಥಿಯೇಟರ್ ಬಳಿ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಹಾಲಿಂಗ ದಾಳಿಗೊಳಗಾದ ವ್ಯಕ್ತಿಯಾಗಿದ್ದಾನೆ. ಕಡೂರಲ್ಲಿ ಆಟೋ ಡ್ರೈವರ್ ವೃತ್ತಿ ಮಾಡಿಕೊಂಡಿದ್ದ ಆರೋಪಿ ಭರತ್, ಇತ್ತೀಚೆಗೆ ಕೌಂಟುಂಬಿಕ ಕಾರಣಗಳಿಂದ ಗಂಡನ ಜೊತೆ ಜಗಳ ಮಾಡಿ ಭರತ್ ತಾಯಿ ತವರು ಮನೆ ಸೇರಿದ್ದಳು. ತಾಯಿ ತನ್ನ ಮನೆಗೆ ಮರಳಿ ಬರುವಂತೆ ಹಲವು ಬಾರಿ ತಿಳಿಸಿದ್ದ. ಆದರೂ ತಾಯಿ ಬಂದಿರಲಿಲ್ಲ, ಕೊನೆಗೆ ತನ್ನ ತಾಯಿಯನ್ನ ಕಳಿಸುವಂತೆ ಮಾವ ಮಹಾಲಿಂಗನಿಗೂ ತಿಳಿಸಿದ್ದ. ಆದರೆ ಮಾವ ಕಳಿಸಲು ಒಪ್ಪಿರಲಿಲ್ಲ.

ನನ್ನ ತಂಗಿಗೆ ತಂದೆ-ಮಗ ಸೇರಿ ಹಿಂಸೆ ನೀಡ್ತಿರಾ? ನಿನ್ನೂ ನಿನ್ನ ಅಪ್ಪನನ್ನೂ ಜೈಲಿಗೆ ಹಾಕಿಸ್ತೇನೆ ಎಂದಿದ್ದ ಮಾವ ಮಹಾಲಿಂಗನ ಮೇಲೆ ಕಳೆದ ಬುಧವಾರ ನಡುರಸ್ತೆಯಲ್ಲೇ ಮಚ್ಚಿನಿಂದ ಮಾವನ ಮೇಲೆ ಆರೋಪಿ ಭರತ್ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾನೆ.

ಏಕಾಏಕಿ ದಾಳಿಯಿಂದ ಗಂಭೀರ ಗಾಯಗೊಂಡಿರುವ ಮಹಾಲಿಂಗನ ಸ್ಥಿತಿ ಚಿಂತಾಜನಕವಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಭರತ್ ನನ್ನ ಕಡೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Edited By : Shivu K
PublicNext

PublicNext

05/01/2025 01:27 pm

Cinque Terre

38.41 K

Cinque Terre

0

ಸಂಬಂಧಿತ ಸುದ್ದಿ