ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡ್ಯಾನ್ಸರ್ ಕನಸು ಕಂಡಿದ್ದ ಅಪ್ಪು ಅಭಿಮಾನಿ ದುರಂತ ಅಂತ್ಯ..!

ಬೆಂಗಳೂರು: ಆಕೆ ಅಪ್ಪಟ ಅಪ್ಪು ಅಭಿಮಾನಿ, ಡ್ಯಾನ್ಸರ್ ಆಗುವ ಕನಸು ಕಂಡಿದ್ಳು. ‌ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದ್ತಾ ಇದ್ದ ಬಾಲಕಿ ಮೇಲೆ ತಂದೆ ತಾಯಿ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ರು. ಆದ್ರೆ ವಿಧಿಯಾಟಕ್ಕೆ ಆ ಬಾಲಕಿ ಸಾವಿನ ಮನೆ ಸೇರಿದ್ದಾಳೆ.

ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದ ಈ ಮುದ್ದು ಮುಖದ ಬಾಲಕಿ ಹೆಸರು ತೇಜಸ್ವಿನಿ. ಈಕೆ ಡ್ಯಾನ್ಸ್ ಮಾಡ್ತಿದ್ರೆ ಪೋಷಕರಿಗೆ ಎಲ್ಲಿಲ್ಲದ ಆನಂದ. ಮಗಳು ಒಳ್ಳೆ ಡ್ಯಾನ್ಸರ್ ಆಗ್ತಾಳೆ ಅಂತ ಮಗಳ ಮೇಲೆ ತಂದೆ ತಾಯಿ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ರು.

ಇನ್ನು ನೃತ್ಯ ರಾಣಿ ಅಪ್ಪು ಡ್ಯಾನ್ಸ್ ಕ್ಲಾಸ್‌ನಲ್ಲಿ ತರಬೇತಿ ಪಡಿತಿದ್ಳು, ಆದ್ರೆ ನಿನ್ನೆ ಶಾಲೆ ಮುಗಿಸಿ ಬರ್ತಿದ್ದ ತೇಜಸ್ವಿನಿ ಡ್ಯಾನ್ಸ್ ಮಾತ್ರವಲ್ಲ ಜೀವನದ ಪಯಣವನ್ನೇ ಮುಗಿಸಿದ್ದಾಳೆ.

ಹೌದು... ನಿನ್ನೆ ಮಧ್ಯಾಹ್ನ 12.45ರ ಸಮಯ, ಶಾಲೆಗೆ ಹೋಗಿದ್ದ 15 ವರ್ಷದ ಬಾಲಕಿ ತೇಜಸ್ವಿ ಬಗುಡಿ ಮೆಟ್ರೋ ಸ್ಟೇಷನ್ ಪಕ್ಕದಲ್ಲೇ ಇದ್ದ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ಳು. ಆದ್ರೆ ಆಕೆಗೆ ಸಾವು ಕಣ್ಣ ಮುಂದೆಯೇ ಇದೇ ಅನ್ನುವ ಅಂದಾಜು ಸಹ ಇರಲಿಲ್ಲ, ರಸ್ತೆ ಪಕ್ಕದಲ್ಲೇ ಇದ್ದ ಜಾಗದಲ್ಲಿ ಆರು ಅಂತಸ್ತಿನ ಕಟ್ಟಡದ ಕೆಲಸ ನಡಿತಾ ಇತ್ತು. ಆದ್ರೆ ಅದಕ್ಕೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕಾಮಗಾರಿ ನಡಿತಿದ್ರು, ಟಾರ್ಪಲ್‌ ಕಟ್ಟಿರಲಿಲ್ಲ. ಇದರಿಂದಾಗಿ 4ನೇ ಅಂತಸ್ತಿನಿಂದ ಸಾರವೆ ಮರದ ತುಂಡು ಸೀದಾ ಬಾಲಕಿ ಮೇಲೆ ಬಿದ್ದಿದೆ. ಗಾಯಗೊಂಡ ಬಾಲಕಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಇತ್ತ ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಮನ ಕಲಕುವಂತಿತ್ತು. ಘಟನೆ ಸಂಬಂಧ ಮಾಲೀಕನ ನಿರ್ಲಕ್ಷ್ಯ ಹಿನ್ನಲೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತೇಜಸ್ವಿನಿ ಡ್ಯಾನ್ಸರ್ ಆಗುವ ಕನಸು ಕಂಡಿದ್ದು ಅರ್ಧಕ್ಕೆ ಕಮರಿಹೋಗಿದ್ದು, ಕುಟುಂಬಸ್ಥರನ್ನ ನೋವಿನ‌ ಕಡಲಿಗೆ ನೂಕಿದೆ.

ಸದ್ಯ ತೇಜಸ್ವಿನಿ ಮೃತದೇಹ ಕಿಮ್ಸ್ ಆಸ್ಪತ್ರೆ ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ. ಅದೇನೆ ಹೇಳಿ ಯಾರದ್ದೋ ನಿರ್ಲಕ್ಷ್ಯ ಬಾಲಕಿ ಸಾವಿಗೆ ಕಾರಣವಾಗಿರೋದು ಮಾತ್ರ ನಿಜಕ್ಕೂ ವಿಪರ್ಯಾಸ ಸಂಗತಿ..

Edited By : Ashok M
PublicNext

PublicNext

05/01/2025 11:30 am

Cinque Terre

36.87 K

Cinque Terre

1

ಸಂಬಂಧಿತ ಸುದ್ದಿ