ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಚಾರ್ಮಾಡಿ ಮೃತ್ಯಂಜಯ ನದಿಗೆ ದನದ ತ್ಯಾಜ್ಯ ಎಸೆದ ಇಬ್ಬರು ಆರೋಪಿಗಳು ಅರೆಸ್ಟ್

ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿ ಮೃತ್ಯುಂಜಯ ನದಿಗೆ ದನದ ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕತ್ರಿಗುಡ್ಡೆ ನಿವಾಸಿ ಮೊಹಮ್ಮದ್ ಇರ್ಷಾದ್ (28), ಮೊಹಮ್ಮದ್ ಅಜ್ಮಲ್(30) ಬಂಧಿತ ಆರೋಪಿಗಳು.

ಎರಡು ವಾರಗಳ ಹಿಂದೆ ನೇತ್ರಾವತಿ ನದಿಯ ಉಪನದಿ ಮೃತ್ಯುಂಜಯ ನದಿಯಲ್ಲಿ ದನದ ತ್ಯಾಜ್ಯ ಕಂಡು ಬಂದಿತ್ತು. ಈ ತ್ಯಾಜ್ಯವನ್ನು ದುಷ್ಕರ್ಮಿಗಳು ಬೇಕೆಂದೇ ಎಸೆದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಬೇಕೆಂದು ಹುನ್ನಾರ ಅಡಗಿದೆ ಎಂದು ವಿಎಚ್‌ಪಿ -ಬಜರಂಗದಳ ಆಗ್ರಹಿಸಿತ್ತು. ಅಲ್ಲದೆ ಶೀಘ್ರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿತ್ತು. ಅದಕ್ಕಾಗಿ ಸೋಮವಾರ ಪ್ರತಿಭಟನೆಯ ಕರೆಯನ್ನೂ ಕೊಟ್ಟಿತ್ತು. ಅದಕ್ಕಿಂತ ಮೊದಲೇ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
PublicNext

PublicNext

05/01/2025 11:26 am

Cinque Terre

29.37 K

Cinque Terre

3

ಸಂಬಂಧಿತ ಸುದ್ದಿ