ಲಕ್ಷ್ಮೇಶ್ವರ : ಪಟ್ಟಣದ ಶಿಗ್ಲಿನಾಕಾದಲ್ಲಿ ಕ್ರಾಂತ್ರಿವೀರ ಸಂಗೋಳ್ಳಿರಾಯಣ್ಣ ಆಟೋ ಚಾಲಕರ ಮತ್ತು ಮಾಲಕರ ರೀಕ್ಷಾ ನಿಲ್ದಾಣದ ಉದ್ಘಾಟನೆ ಶನಿವಾರ ಪತ್ರಕರ್ತ ರಮೇಶ ನಾಡಗೇರ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಲಕ್ಷ್ಮೇಶ್ವರ ಐತಿಹಾಸಿಕ ನಗರವಾಗಿದ್ದು ಇಲ್ಲಿ ರಾಜ್ಯ ಮತ್ತು ಬೇರೆ ರಾಜ್ಯಗಳಿಂದ ಶ್ರೀ ಸೋಮೇಶ್ವರ ದೇವಸ್ಥಾನ ಮತ್ತು ದೂದಪೀರಾಂ ದರ್ಗಾಕ್ಕೆ ಪ್ರವಾಸಿಗರು ಬರುತ್ತಿದ್ದು ಪ್ರವಾಸಿಗರಿಗೆ ಹೊರೆ ಆಗದಂತೆ ಸೂಕ್ತ ದರದಲ್ಲಿ ಅವರನ್ನು ಕೊಂಡೊಯ್ಯುವಬೇಕು.
ಅದೇ ರೀತಿ ಬಡ ಮತ್ತು ಮಧ್ಯಮ ವರ್ಗದ ಜನರು ಗರ್ಭಿಣಿ ಸ್ತ್ರೀಯರು ಹಿರಿಯ ನಾಗರಿಕರು ಅವರನ್ನು ಸಹ ಸೂಕ್ತ ದರದೊಂದಿಗೆ ಪಡೆದುಕೊಂಡು ಸುರಕ್ಷಿತವಾಗಿ ತಲುಪಿಸಿ ಈ ರೀಕ್ಷಾ ನಿಲ್ದಾಣದ ಬಗ್ಗೆ ಸದಾ ಅಭಿಪ್ರಾಯ ಪಡೆದುಕೊಳ್ಳುವಂತೆ ಕಾರ್ಯನಿರ್ಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿರಾಜಾಹ್ಮದ ಡಾಲಾಯಾತ ಮಹಾಂತೇಶ ಜಗದಮನಿ ನಸೀರಾಅಹ್ಮದ ಚಿಂಗಾಪೂರಿ ಸಹದೇವಪ್ಪ ಯಂಕೋಜ್ಜಿ ಯಲಪ್ಪ ಹುರಕ್ಕನವರ ರಾಜೇಸಾಭ್ ನಧಾಪ ಸೋಮು ಉಪ್ಪಾರ ನಿಂಗಾಪ್ಪ ಕೊಳುರ ನೀಸಾರ ಚನ್ನಪ್ಪಟ್ಟಣ ಸೋಮು ಬೆಟಗೇರಿ ಮುದಕಪ್ಪ ಗದ್ದಿ ಮಾಳಿಂಗರಾಯ ಪೂಜಾರ ಪದ್ಮರಾಜ ಪಾಟೀಲ್ ಅಸೋಕ ಸೊರಟೂರ ಸೋಮು ಯತ್ತಿನಹಳ್ಳಿ ಅಪಜಲ್ ರಿತ್ತಿ ಸುರೇಶ ಲಮಾಣಿ ಮಲ್ಲೇಶಿ ಬಸ್ಸಾಪೂರ ಅನೇಕರು ಇದ್ದರು.
Kshetra Samachara
04/01/2025 04:54 pm