ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಉರುಳಿ ಬಿದ್ದ ಟ್ರ್ಯಾಕ್ಟರ್, ತಪ್ಪಿದ ಭಾರೀ ದುರಂತ

ನರಗುಂದ: ನರಗುಂದ ತಾಲ್ಲೂಕಿನ ಶಿರೋಳ ಹಾಗೂ ಕೊಣ್ಣೂರ ಮಾರ್ಗದ ಮಧ್ಯದಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ ಸಾವಿರಾರು ರೂಪಾಯಿ ಕಬ್ಬು ನೆಲಕ್ಕುರುಳಿದೆ.

ಶಿರೋಳ ಮಾರ್ಗ ಮೂಲಕ ಸಕ್ಕರೆ ಕಾರ್ಖಾನೆಗೆ ಹೋಗಬೇಕಾದ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಚಲಿಸುತ್ತಿರುವ ಟ್ರ್ಯಾಕ್ಟರ್ ಚಕ್ರದ ಸರಳು ಕಟ್ ಆಗಿರುವ ಕಾರಣ ಈ ಅವಘಡ ಸಂಭವಿಸಿದೆ. ಪರಿಣಾಮ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ರಸ್ತೆಯಲ್ಲಿ ಈ ಘಟನೆ ನಡೆದಿದೆ‌. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವರದಿ - ಮಲ್ಲಿಕಾರ್ಜುನ , ಪಬ್ಲಿಕ್ ನೆಕ್ಸ್ಟ್, ನರಗುಂದ

Edited By : Vinayak Patil
PublicNext

PublicNext

06/01/2025 09:58 pm

Cinque Terre

27.14 K

Cinque Terre

0