ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಪದಾಧಿಕಾರಿಗಳ ಪದಗ್ರಹಣ

ಗದಗ : ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ 2024-2029 ರ ಅವಧಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ 2025 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಶನಿವಾರ ಜರುಗಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಹಾಗೂ ಕ್ಯಾಲೆಂಡರ್ ಬಿಡುಗಡೆಮಾಡಿ ಮಾತನಾಡಿದ ಗಂಗಣ್ಣ ಮಾಹಾಂತಶೆಟ್ಟರ ಅವರು ತಾಲೂಕಿನ ಎಲ್ಲಾ ಇಲಾಖೆಗಳ ನೌಕರರು ಕಾಯಾ ವಾಚಾ ಮನಸ್ಸಿನಿಂದ ದುಡಿದು ತಾಲೂಕಿಗೆ ಒಳ್ಳೆಯ ಹೆಸರು ತರಬೇಕು ಈ ನೂತನ ತಾಲೂಕಿಗೆ ನೌಕರರು ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಸೂಕ್ತ ಸಲಹೆ ಮಾಹಿತಿ ನೀಡಿ ಅವರು ಕಚೇರಿಗೆ ಅಲೆದಾಡುವಂತೆ ಮಾಡುವುದನ್ನು ತಪ್ಪಿಸಬೇಕು ಇದರಿಂದ ನೌಕರರ ಬಗ್ಗೆ ಜನಸಾಮಾನ್ಯರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯವಾಗುತ್ತದೆ ಎಂದರು.

ಕ್ಷೇತ್ರಶಿಕ್ಷಣ ಅಧಿಕಾರಿ ಎಚ್.ಎನ್ ನಾಯಕ ಮಾತನಾಡಿ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ನೌಕರರು ಒಗ್ಗಟ್ಟಿನಿಂದ ತಾವೇ ಬಗಿಹರಿಸಿಕೊಳ್ಳಬೇಕು ಇದರಿಂದ ಇಲಾಖೆಗೆ ಹೆಚ್ಚು ಗೌರವ ಲಭಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರವಿ ಗುಂಜಿಕರ ಮಾಜಿ ಶಾಸಕ ರಾಮಣ್ಣ ಲಮಾಣಿ ತಹಶೀಲ್ದಾರ ವಾಸುದೇವ ವಿ ಸ್ವಾಮಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಮಾತನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಹೂವಿನ ಶಿಗ್ಲಿ ವಿತಕ್ತಮಠದ ಚನ್ನವೀರ ಶ್ರೀಗಳು ವಹಿಸಿದರು. ವೇದಿಕೆಯ ಮೇಲೆ ಬಿ‌ಎಸ್ ಹರ್ಲಾಪೂರ ಡಿ.ಎಚ‌್.ಪಾಟೀಲ್ ನೂತನ ಅಧ್ಯಕ್ಷ ಗುರುರಾಜ ಹವಳದ ಡಾ.ಪ್ರವೀಣ ಸಜ್ಜಣ್ಣ ಶಿಗ್ಗಾಂವಿ ಹಾಗೂ ಸವಣೂರ ತಾಲೂಕ ನೌಕರ ಸಂಘದ ಅಧ್ಯಕ್ಷರು ಸೇರಿದಂತೆ ಅನೇಕರು ಇದ್ದರು.

Edited By : PublicNext Desk
Kshetra Samachara

Kshetra Samachara

04/01/2025 04:51 pm

Cinque Terre

12.74 K

Cinque Terre

0