ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಯ್ನಿಡಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

ಗದಗ : CRPF ದಲ್ಲಿ 26 ವರ್ಷ ದೇಶ ಸೇವೆ ಗೖದ ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ ಯೋದರಾದ ಮೖಲಾರಪ್ಪ ಮ್ಯಾಟಣ್ಣನವರ ಅವರನ್ನು ಲಕ್ಷ್ಮೇಶ್ವರ ನಗರಕ್ಕೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಯೋಧರಿಗೆ ಸ್ವಗೃಹದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮೀಕೋಳ್ಳಲಾಯಿತು.

ಕಾರ್ಯಕ್ರಮ ವನ್ನು ಡಿ ದೆವರಾಜ ಗದಗ ವಿಭಾಗೀಯ ನಿಯಂತ್ರಣಾಧಿಕಾರಿಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಂಜಿನಪ್ಪ AEE ಹೆಸ್ಕಾಂ ಲಕ್ಷ್ಮಿಶ್ವರ, ಶ್ರೀ ಮತಿ ಸವಿತಾ ಆದಿ ವ್ಯವಸ್ಥಾಪಕರು ksrtc depo ಲಕ್ಷ್ಮಿಶ್ವರ, ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಾಜರಿದ್ದರು.

ನಾಗರಾಜ್ ಮಡಿವಾಳರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು, ಸಹೋದರಾದ ಪಕ್ಕೀರೇಶ, ಮ್ಯಾಟಣ್ಣನವರ ಮಾತನಾಡಿದರು, ಹನುಮಂತ ಮ್ಯಾಟಣ್ಣನವರ, ಮಾರುತಿ ಹರಿಜನ, ತಿಪ್ಪಣ್ಣ ಸಂಶಿ, ಬಸವರಾಜ್ ಸೂರಣಗಿ, ರವಿ ಕರೆಣ್ಣನವರ, ಸಂಜೀವಣ್ಣನವರ ನಿವೃತ್ತ ಯೋದರ ಸಂಘ, ಹಾಗೂ ಪೖಲವಾನರ ಸಂಘವರು CRPF ದಲ್ಲಿ 26 ವರ್ಷ ದೇಶ ಸೇವೆ ಗೖದ ಯೋದರಾದ ಶ್ರೀ ಮೖಲಾರಪ್ಪ ಮ್ಯಾಟಣ್ಣನವರ ದಂಪತಿಗಳಿಗೆ ಸನ್ಮಾನಿಸಲಾಯಿತು.

ನಿವೃತ್ತ ಯೋದರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಕುಟುಂಬ ವರ್ಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶ್ರೀಕಾಂತ್ ಬಾಲೆಹೋಸುರ ಇವರು ನಿರೂಪಿಸಿ ದರು. ಲಕ್ಷ್ಮಿ ಶ್ವರ ಹಾಗೂ ಬಾಲೆಹೋಸೂರು ಗ್ರಾಮದ ಅಪಾರ ಬಂಧುಗಳು ಅಭಿಮಾನಿಗಳು ಗುರು ಹಿರಿಯರು ಭಾಗವಹಿಸಿ ದ್ದರು.

Edited By : PublicNext Desk
Kshetra Samachara

Kshetra Samachara

03/01/2025 04:53 pm

Cinque Terre

19.48 K

Cinque Terre

0