ಬೆಂಗಳೂರು : ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಸುಳಿವು ಬಿಎಂಆರ್ಸಿಎಲ್ ಕೊಟ್ಟಿದೆ.ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಸಾಧ್ಯತೆ ಇದ್ದು,ಅಂದುಕೊಂಡಂತೆ ಆದರೆ ಇದೇ ತಿಂಗಳಿನಲ್ಲಿ ಮೆಟ್ರೋ ಟಿಕೆಟ್ ದರ ಹೈಕ್ ಮಾಡೋ ಸಾಧ್ಯತೆ ಇದೆ.
ಕಳೆದ ಹತ್ತು ವರ್ಷದಿಂದ ಮೆಟ್ರೋದಲ್ಲಿ ಯಾವುದೇ ಟಿಕೆಟ್ ಬದಲಾವಣೆಗಳಿಲ್ಲ ಆದರೆ ಈಗ ಟಿಕೆಟ್ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ.ಈಗಾಗಲೇ ಸಾರ್ವಜನಿಕ ಅಭಿಪ್ರಾಯವನ್ನು ಕೂಡ ಕಲೆಕ್ಟ್ ಮಾಡಲಾಗಿದೆ.ಪ್ರಯಾಣಿಕರನ್ನ ಗಮನದಲ್ಲಿಟ್ಟುಕೊಂಡೆ ದರ ಏರಿಕೆ ಮಾಡ್ತೀವಿ. ಶೇ. 10-15 ರಷ್ಟು ಏರಿಕೆ ಮಾಡುವ ಈಗಾಗಲೇ ಪ್ಲಾನ್ ಮಾಡಲಾಗಿದ್ದು,ಸಾರ್ವಜನಿಕ ಅಭಿಪ್ರಾಯಗಳನ್ನು ಕೂಡ ಆಲಿಸಲಾಗಿದೆ ಜೊತೆಗೆ ನಮ್ಮ ಮೆಟ್ರೋದಲ್ಲಿ ಸಿಬ್ಬಂದಿಗಳು ಕೂಡ ಹೆಚ್ಚಿರುವುದರಿಂದ, ಅವರ ನಿರ್ವಹಣೆ ಕೂಡ ಅತ್ಯವಶ್ಯಕ ಸಲಹಾ ಸಮಿತಿ ಯಾವಾಗ ನಮಗೆ ಗ್ರೀನ್ ಸಿಗ್ನಲ್ ಕೊಡುತ್ತೋ ಅವತ್ತೇ ದರ ಏರಿಕೆ ಮಾಡ್ತೀವಿ.
ಈ ಬಾರಿ ದರ ಏರಿಕೆ ಆಗೋದು ಪಕ್ಕ ಅಂತ BMRCL ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ತಿಳಿಸಿದ್ದಾರೆ.
PublicNext
04/01/2025 12:38 pm