ಬೆಂಗಳೂರು : ಕಾಂಗ್ರೆಸ್ ಸರ್ಕಾರ ಲೈಸೆನ್ಸ್ ಪಡೆದು ಭ್ರಷ್ಟಾಚಾರ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥ ನಾರಾಯಣ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್‌ಡಿಕೆಯಿಂದ 60% ಆರೋಪ ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರ ಆರಂಭದಿಂದಲೂ ಹಗರಣಗಳ ಮೇಲೆ ಹಗರಣ ನಡೆಸ್ತಿದೆ. ಬರೀ ಭ್ರಷ್ಟಾಚಾರ ಆಪಾದನೆ, ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ. ವಾಲ್ಮೀಕಿ ನಿಗಮದಲ್ಲಿ 100% ಭ್ರಷ್ಟಾಚಾರ ಇರುವುದನ್ನ ಅವರೇ ಒಪ್ಪಿಕೊಂಡಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆಯಿಂದ ಈ ಪ್ರಕರಣ ಹೊರಗೆ ಬಂತು, ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಎಸ್ಐ ಪೋಸ್ಟ್‌ಗೆ ವರ್ಗಾವಣೆಗೆ 35 ಲಕ್ಷ , ಇದರಲ್ಲೂ ಸಾಕ್ಷ್ಯ ಇದೆಯಲ್ವಾ? ಮುಡಾದಲ್ಲೂ ಸಾಕ್ಷಿ ಇದೆ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲೂ ಸಾಕ್ಷಿ ಇದೆ,ಬೆಳಗಾವಿಯಲ್ಲೂ ಸಚಿವರ ಪಿಎಯಿಂದ ಎಸ್‌ಡಿಎ ನೌಕರ ಆತ್ಮಹತ್ಯೆ, ಅಬಕಾರಿ, ಆರೋಗ್ಯ ಇಲಾಖೆಗಳಲ್ಲೂ ಕಮಿಷನ್, ಭ್ರಷ್ಟಾಚಾರ ಜೊತೆಗೆ ಸಚಿವರಿಗೂ ಕಮಿಷನ್ ಕೊಡಬೇಕು ಏನಾದ್ರೂ ಮಾಡಿ ಇವ್ರಂತೂ ಭಂಡರಾಗಿದ್ದಾರೆ. ನಾವಿರೋದೇ ಹೀಗೆ ಅಂತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಒಂದು ಕಡೆ ಸಮಾಜದಲ್ಲಿ ಜಾತಿ ಹೆಸರಿನಲ್ಲಿ ಒಡಕು ಮೂಡಿಸ್ತಿದ್ದಾರೆ. ಭ್ರಷ್ಟಾಚಾರ ಮಾಡೋಕ್ಕೂ ಜಾತಿ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಾತಿ ಹೆಸರಿನಲ್ಲಿ ಅನುಕಂಪ ಪಡೆಯೋದು ಭ್ರಷ್ಟಾಚಾರ ಮಾಡೋದು, ಇವರ ಭ್ರಷ್ಟಾಚಾರಕ್ಕೆ ದಾಖಲೆ ಮೇಲೆ ದಾಖಲೆ ಇದೆಯಲ್ಲ ಎಂದು ಕಿಡಿ ಕಾರಿದರು.
ಇವರ ಮೇಲೆ 100% ಭ್ರಷ್ಟಾಚಾರ ಆರೋಪ ಇದೆ. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಆರೋಪ ಮಾಡಿಲ್ಲ. ಎಲ್ಲಾ ಇಲಾಖೆಗಳಲ್ಲೂ ವ್ಯವಸ್ಥಿತವಾಗಿ ಕಮಿಷನ್ ದಂಧೆ ನಡೀತಿದೆ. ಇದರಲ್ಲಿ ಸುಳ್ಳೇನೂ ಇಲ್ಲ. ನಮ್ಮ ಮೇಲೆ 40% ಆರೋಪ ಮಾಡಿದ್ರು. ಆದ್ರೆ ಅದೇ ಲೋಕಾಯುಕ್ತ ಈಗ ನಮ್ಮ ಮೇಲಿನ ಆರೋಪಕ್ಕೆ ಕ್ಲೀನ್ ಚಿಟ್ ಕೊಟ್ಟಿದೆ. ನಮ್ಮ ಸಿಎಂ ಮೇಲೆ ಪೇಸಿಎಂ, 40% ಆರೋಪ ಮಾಡಿದ್ರಲ್ಲ. ಯಾವ ದಾಖಲೆ ಕೊಟ್ರು ಇವ್ರು? ಈಗ ಇವರ ಮೇಲಿನ ಆರೋಪಗಳಿಗೆ ದಾಖಲೆ ಎಲ್ಲ ಇದೆ
ಲೈಸೆನ್ಸ್ ಪಡೆದು ಭ್ರಷ್ಟಾಚಾರ ಮಾಡ್ತಿದ್ದಾರೆ. ಇವರು ಭಂಡ ಬಿದ್ದಿದ್ದಾರೆ. ಭಂಡರ ವಿರುದ್ಧ ಏನು ಹೋರಾಟ ಮಾಡ್ತೀರಿ ಹೇಳಿ? ಎಂದು ಪ್ರಶ್ನಿಸಿದರು.
PublicNext
06/01/2025 01:57 pm