ಉಡುಪಿ: ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮ ಪಂಚಾಯತ್‌ನಲ್ಲಿದ್ದ ಮೂವರು ಸಿಬ್ಬಂದಿ ರಾಜೀನಾಮೆ ನೀಡಿದ್ದು, ಎರಡು ದಿನಗಳ ಹಿಂದೆ ಈ ಪಂಚಾಯತ್‌ಗೆ ಬೀಗ ಜಡಿಯಲಾಗಿತ್ತು. ಇಲ್ಲಿರುವ ಮೂವರು ಸಿಬ್ಬಂದಿ ಮಾನಸಿಕ ಕಿರುಕುಳದ ಆರೋಪ ನೀಡಿ ರಾಜೀನಾಮೆ ಸಲ್ಲಿಸಿದ್ದರು. ಇದರ ನೇರ ಪರಿಣಾಮ ಪಂಚಾಯತ್ ವ್ಯಾಪ್ತಿಯ ಜನರ ಮೇಲಾಗುತ್ತಿದ್ದು ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ.
ಇಲ್ಲಿನ ಪಂಚಾಯತ್ ಸಿಬ್ಬಂದಿ ಡಿಸೆಂಬರ್ 19ರಂದು
"ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಿದ್ದು ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದೇವೆ' ಎಂದು ಪತ್ರ ಸಲ್ಲಿಸಿದ್ದರು. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮೇಲಾಧಿಕಾರಿಗಳಿಗೆ ಪತ್ರ ಮೂಲಕ ಮಾಹಿತಿ ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಂದಿದ್ದು ಜನರು ಅನುಭವಿಸುವಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಚಾಯತ್ ಸದಸ್ಯ ಸಂತೋಷ್ ಬೈರಂಪಳ್ಳಿ, ಪಂಚಾಯತ್‌ಗೆ ಅಧ್ಯಕ್ಷರೇ ಬೀಗ ಜಡಿದಿದ್ದು ಅಕ್ಷಮ್ಯ ಅಪರಾಧ. ಗ್ರಾಮ ಪಂಚಾಯತ್‌ಗೆ ಬೀಗ ಜಡಿಯುವ ಹಕ್ಕು ಯಾರಿಗೂ ಇಲ್ಲ.ಇದೊಂದು ಸಾರ್ವಜನಿಕ ಕಚೇರಿ. ಆದರೆ ರಾಜಕೀಯ ಕಾರಣಕ್ಕಾಗಿ ಅಧ್ಯಕ್ಷರು ಬೀಗ ಹಾಕಿದ್ದಾರೆ. ಈ ಪಂಚಾಯತ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಸ್ಥಳೀಯ ಶಾಸಕರು ಕೂಡ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಸಿಬ್ಬಂದಿ ಮಾನಸಿಕವಾಗಿ ನೊಂದಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
04/01/2025 12:32 pm