ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ವಿವಾದಿತ ದರ್ಗಾ ಜಾಗದಲ್ಲಿ ಹೊಸ ಕಾಮಗಾರಿ ಆರೋಪ ಆಕ್ರೋಶಗೊಂಡ ಹಿಂದೂ ಯುವಕರು

ಚಿಕ್ಕಮಗಳೂರು: ನಗರಸಭೆಯ ಕಮಿಷನರ್ ವಿರುದ್ದ ಧಿಕ್ಕಾರದ ಘೋಷಣೆ. ಸ್ಥಳದಲ್ಲಿ ಬೀಡು ಬಿಟ್ಟಿರುವ ಖಾಕಿ ಟೀಂ. ಅಲ್ಲಿಂದ ಕಾಲ್ಕಿತ್ತ ಕಮಿಷನರ್ ಕಾರನ್ನ ಓಡೋಗಿ ಅಡ್ಡ ಹಾಕಿರೋ ಹಿಂದೂಪರ ಸಂಘಟನೆ ಯುವಕರು. ಹೌದು ಕಾಫಿನಾಡು ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿರೋ ವಿವಾದಿತ ದರ್ಗಾದ ಮುಂದೆ ನಡೆದ ಚಿತ್ರಣಗಳಿವು.

ಇಷ್ಟು ದಿನ ದರ್ಗಾದಲ್ಲಿ ಯಾವುದೇ ಲೈಟ್ ಇರಲಿಲ್ಲ ಶುಕ್ರವಾರ ಸಂಜೆ ಹೊಸ ಲೈಟ್ ಉರಿಯುತ್ತಿದ್ದಂತೆಯೇ ಸ್ಥಳೀಯ ಯುವಕರು ಹಾಗೂ ಹಿಂದೂ ಮುಖಂಡರು ದರ್ಗಾದ ಮುಂದೆ ಜಮಾಯಿಸಿದ್ರು. ಇದು ಅನಧಿಕೃತವಾಗಿ ವಿದ್ಯುತ್ ಪಡೆದಿರೋದು ದರ್ಗಾದಲ್ಲಿ ಟೈಲ್ಸ್ ಹಾಕೋ ಕಾಮಗಾರಿ ನಡೆಯುತ್ತಿದೆ ಎಂದು ಅಕ್ರೋಶ ಹೊರಹಾಕಿದ್ರು. ಸ್ಥಳಕ್ಕೆ ನಗರಭೆ ಅಧಿಕಾರಿಗಳು ಅಗಮಿಸುವಂತೆ ಆಗ್ರಹ ಕೇಳಿ ಬಂತು. ಸ್ಥಳಕ್ಕೆ ಬಂದ ನಗರಸಭೆಯ ಕಮಿಷನರ್ ಬಸವರಾಜ್ ವಿರುದ್ದ ಯುವಕರು ಹರಿಹಾಯುತ್ತಿದ್ದಂತೆಯೇ ಕಮಿಷನರ್ ಅಲ್ಲಿಂದ ತೆರಳಲು ಮುಂದಾಗುತ್ತಿದಂತೆ ವಾಹನ ಬೆನ್ನತ್ತಿದ್ದ ಯುವಕರ ತಂಡ ಓಡಿ ಹೋಗಿ ನಗರ ಸಭೆ ಕಮಿಷನರ್ ವಾಹನ ತಡೆದು ವಾಪಸ್ಸು ಕರ್ಕೊಂಡು ಬಂದ್ರು.

ಇನ್ನೂ ವಿವಾದಿತ ಜಾಗ ಗೆಜೆಟ್ ನೋಟಿಫೀಕೆಷನ್ ನಲ್ಲಿ ನೀಡಲಾಗಿತ್ತು. ಕಳೆದ ಒಂದು ವರ್ಷದ ಹಿಂದೆ ಇದೇ ರೀತಿ ವಿವಾದವಾಗಿದ್ದಾಗ ಯಥಸ್ಥಿತಿ ಕಾಪಾಡುವಂತೆ ಜಿಲ್ಲಾಡಳಿತ ಸೂಚಿಸಿತ್ತು ಅಂತ ಕೆಲವರು ಹೇಳ್ತಿದ್ದಾರೆ. ಈಗ ಮತ್ತೇ ಅಲ್ಲಿ ಯಾರ ಅನುಮತಿ ಇಲ್ಲದೇ ಅನಧಿಕೃತ ಲೈಟ್ ಹಾಕಿದ್ದಾರೆ.‌ ಒಳಗಡೆ ಟೈಲ್ಸ್ ಹಾಕೊ ಕಾಮಗಾರಿ ನಡೆಸ್ತಾ ಇದ್ದಾರೆ ಅಂತಾ ಆರೋಪಿಸಿ ಹಿಂದೂ ಯುವಕರು ಧಿಕ್ಕಾರ ಘೋಷಣೆ ಕೂಗಿದ್ರು.

ಪರಿಸ್ಥಿತಿ ಕೈಮೀರೋ ಸಾಧ್ಯತೆ ಹೆಚ್ಚಾಗ್ತಿದ್ರಿಂದ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಯಿತು. ಡಿವೈಎಸ್ಪಿ ಸ್ಥಳದಲ್ಲಿ ಮೊಖಂ ಹೂಡಿದ್ರು. ಈಗಲೇ ಲೈಟ್ ಬಂದ್ ಮಾಡಿ ಕೇಸ್ ದಾಖಲಿಸುವಂತೆ ಆಗ್ರಹಿಸಿದ್ರು. ನಗರಸಭೆಯ ಅಧ್ಯಕ್ಷೆ ಸುಜಾತ ಶಿವಕುಮಾರ್ ಪೊಲೀಸರ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ರು.

ಒಟ್ಟಾರೆ ವರ್ಷಕ್ಕೊಮ್ಮೆ ಈ ದರ್ಗಾದ ಜಾಗದಲ್ಲಿ ವಿವಾದವಂತೂ ನಡೆಯುತ್ತಲೇ‌ ಇದೆ. ಹಿಂದೂ ಮುಖಂಡ್ರು ಈ ಜಾಗಕ್ಕೆ ದಾಖಲೆಯೇ ಇಲ್ಲ ಅಂದ್ರೆ ನಗರಸಭೆ ಅಧಿಕಾರಿಗಳು ಯಾವುದೇ ಕಾಮಗಾರಿಗೂ ಅನುಮತಿ ನೀಡಿಲ್ಲ ಅಂತಿದ್ದಾರೆ. ದರ್ಗಾದ ಪರವಾಗಿ ದಾಖಲೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಓಟ್ಟಿನಲ್ಲಿ ಕಾಫಿನಾಡಿನಲ್ಲಿ ಹೊಸ ವಿವಾದ ಸೃಷ್ಟಿಯಾಗಿದ್ದು ಇದು ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದು ಕಾದು ನೋಡಬೇಕಿದೆ.

ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು

Edited By : Ashok M
PublicNext

PublicNext

04/01/2025 08:33 am

Cinque Terre

26.34 K

Cinque Terre

0

ಸಂಬಂಧಿತ ಸುದ್ದಿ