ಮಣಿಪಾಲ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ 6 ತಿಂಗಳ ಮಗುವನ್ನು ಸಮಾಜಸೇವಕ ಈಶ್ವರ ಮಲ್ಪೆ ಅವರು ತನ್ನ ಆ್ಯಂಬುಲೆನ್ಸ್‌ನಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ಕರೆದುಕೊಂಡು ಹೋದರು.
ಮಣಿಪಾಲ, ಹಿರಿಯಡಕ, ಕಾರ್ಕಳ, ಬಜಗೋಳಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಮೂಡಿಗೆರೆ, ಬೇಳೂರು, ಹಾಸನ, ಚನ್ನರಾಯಪಟ್ಟಣ, ಬೇಳೂರು ಕ್ರಾಸ್, ನೆಲಮಂಗಲದ ಮೂಲಕ ಜಯದೇವ ಆಸ್ಪತ್ರೆಗೆ ತಲುಪಿಸಲಾಯಿತು.ಈ ಮೊದಲು ಸಮಾಜಸೇವಕ ಈಶ್ವರ್ ಮಲ್ಪೆ ಹಲವರನ್ನು ತುರ್ತು ಸಂದರ್ಭಗಳಲ್ಲಿ ಕರೆದೊಯ್ದು ಆಪದ್ಭಾಂಧವ ಎನಿಸಿಕೊಂಡಿದ್ದಾರೆ.
Kshetra Samachara
03/01/2025 05:25 pm