ಮಂಗಳೂರು: ರಾಜ್ಯದಲ್ಲಿ ಎಚ್ಎಂಪಿವಿ ವೈರಸ್ ಬಗ್ಗೆ ಅನಗತ್ಯ ಆತಂಕ ಸೃಷ್ಟಿಸಲಾಗುತ್ತಿದೆ. ಇದೊಂದು ಸಾಮಾನ್ಯ ವೈರಸ್. ಯಾರೂ ಭಯ, ಆತಂಕ ಪಡುವ ಅಗತ್ಯವಿಲ್ಲ. ಅತ್ಯಂತ ಹಳೆಯದಾದ ವೈರಸ್ ಆಗಿರುವ ಎಚ್ಎಂಪಿವಿ ಪುಟ್ಟ ಮಕ್ಕಳಿನಿಂದ ತೊಡಗಿ 20ವರ್ಷಗಳ ಒಳಗಿನವರಿಗೆ ಒಮ್ಮೆ ಬಂದು ಹೋಗಿರುತ್ತದೆ.
ಮಕ್ಕಳಿಗೆ ಸೋಂಕು ಬಂದರೂ ಒಂದೆರಡು ದಿನಗಳಲ್ಲಿ ವಾಸಿಯಾಗುತ್ತದೆ. ಈ ಸೋಂಕಿಗೆ ನಿರ್ದಿಷ್ಟ ಔಷಧಿಯೂ ಇಲ್ಲ, ಅದರ ಅಗತ್ಯವೂ ಇಲ್ಲ. ಚೀನಾದಲ್ಲಿ ಆಸ್ಪತ್ರೆ ಫುಲ್ ಆಗಿದೆ ಎಂಬುವುದು ಸುಳ್ಳು ಸುದ್ದಿ. ಅಲ್ಲಿ ಎಲ್ಲವೂ ಸಹಜವಾಗಿದೆ ಎಂಬ ವರದಿಯನ್ನು ಚೀನಾ ನೀಡಿದೆ. ಇಲ್ಲದೇ ಇರುವ ವಿಚಾರ ಹುಟ್ಟಿಸುವ ವಿಚಾರದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳ ದುಡ್ಡು ಮಾಡುವ ಹುನ್ನಾರ ಅಡಗಿದೆ ಎಂದು ಮಂಗಳೂರಿನ ಖ್ಯಾತ ವೈದ್ಯ ಶ್ರೀನಿವಾಸ ಕಕ್ಕಿಲಾಯ ಹೇಳಿದ್ದಾರೆ.
PublicNext
08/01/2025 04:02 pm