ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇಎಸ್ಐ ಆಸ್ಪತ್ರೆಗೆ ಸಂಸದ ಬ್ರಿಜೇಶ್ ಚೌಟ ದಿಢೀರ್ ಭೇಟಿ- ಸರ್ವರ್ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತರಾಟೆ

ಮಂಗಳೂರು: ನಗರದ ಶಿವಭಾಗ್‌ನಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ (ಇಎಸ್‌ಐ) ದಿಢೀರ್ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸರ್ವರ್ ಸಮಸ್ಯೆಯ ಬಗ್ಗೆ ವೈದ್ಯರು ಹಾಗೂ ಅಧಿಕಾರಿ ವರ್ಗದವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಸರ್ವರ್ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಕಷ್ಟಕ್ಕೆ ಸಿಲುಕಿದ್ದ ರೋಗಿಗಳ ಸಂಬಂಧಿಕರು "ಸರ್ವರ್ ಸಮಸ್ಯೆಯಿಂದಾಗಿ ತಾವು ಬೆಳಗ್ಗೆ ಬಂದವರು ಸಂಜೆಯವರೆಗೂ ಕಾಯುವ ಸ್ಥಿತಿಯಾಗಿದೆ. ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ" ಎಂದು ಸಂಸದರಲ್ಲಿ ಅವಲತ್ತುಕೊಂಡರು.

ಹಲವಾರು ದಿನಗಳಿಂದ ಇಎಸ್ಐ ಆಸ್ಪತ್ರೆಯಲ್ಲಿ ಇದೇ ರೀತಿಯ ಪರಿಸ್ಥಿತಿಯಿದೆ. ರೋಗಿಗಳನ್ನು ಇಲ್ಲಿ ಸೌಲಭ್ಯ ಇಲ್ಲವೆಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಆದರೆ ಇಎಸ್‌ಐ ಸೌಲಭ್ಯ ಸಿಗಲು ಇಲ್ಲಿಂದ ಆನ್ಲೈನ್‌ನಲ್ಲಿ ದೃಢೀಕರಣ ಸಿಗಬೇಕಾಗಿದೆ. ಸರ್ವರ್ ಸಮಸ್ಯೆಯಿದೆ ಎಂದು ದೂರದ ಊರುಗಳಿಂದ ಬರುವ ರೋಗಿಗಳನ್ನು ಸತಾಯಿಸುತ್ತಿದ್ದಾರೆ ಸಂಬಂಧಿಕರು ದೂರಿತ್ತರು.

ಈ ವೇಳೆ ಆಸ್ಪತ್ರೆಯಲ್ಲಿ ಹಿರಿಯ ಅಧಿಕಾರಿಗಳ ಅನುಪಸ್ಥಿತಿಯನ್ನು ಅರಿತು ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಸಂಸದ ಬ್ರಿಜೇಶ್ ಚೌಟ, ಸಮಸ್ಯೆಗೆ ಕಾರಣವಾದ ಸರ್ವರ್ ದೋಷವನ್ನು ಸರಿಪಡಿಸಲು ಸೂಚಿಸಿದರು. ಸರ್ವರ್ ಸಮಸ್ಯೆಯಿದ್ದರೆ ಇತರ ಆಸ್ಪತ್ರೆಗಳಿಗೆ ನೀಡುವ ಪತ್ರಗಳನ್ನು ಕೈ ಬರಹ ಮೂಲಕ ನೀಡಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು.

Edited By : Shivu K
Kshetra Samachara

Kshetra Samachara

02/01/2025 06:13 pm

Cinque Terre

13.01 K

Cinque Terre

0

ಸಂಬಂಧಿತ ಸುದ್ದಿ