ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನ ಶೇ.50ರಷ್ಟು ಪ್ರದೇಶಗಳಿಗೆ ಕಲುಷಿತ ನೀರು ಪೂರೈಕೆ- ಮನಪಾ ಸಭೆಯಲ್ಲಿ ಗಂಭೀರ ಆರೋಪ

ಮಂಗಳೂರು: ನಗರದ ಶೇಕಡಾ 50ರಷ್ಟು ಪ್ರದೇಶಗಳಿಗೆ ಶುದ್ಧೀಕರಿಸದ ಕುಡಿಯುವ ನೀರು ಪೂರೈಸುತ್ತಿರುವ ಬಗ್ಗೆ ಸದನದಲ್ಲಿ ಗಂಭೀರವಾದ ಆರೋಪ ಕೇಳಿ ಬಂದಿದೆ.

ಮನಪಾ ಸಭೆ ಆರಂಭದಲ್ಲಿಯೇ ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್ ಅವರು ಪಚ್ಚನಾಡಿ, ಸುರತ್ಕಲ್, ಕಾವೂರು ಹಾಗೂ ಬಜಾಲ್‌ನಲ್ಲಿರುವ ಎಸ್‌ಟಿಪಿಯ ನೀರನ್ನು ಶುದ್ಧೀಕರಿಸದೆ ರಾಜಕಾಲುವೆಗೆ ಹರಿಸಲಾಗುತ್ತದೆ‌. ಈ ನೀರು ನೇರವಾಗಿ ಫಲ್ಗುಣಿ, ನೇತ್ರಾವತಿ ನದಿಗಳನ್ನು ಸೇರುತ್ತಿದೆ. ಈ ಮೂಲಕ ಮಂಗಳೂರಿನ ಜನರಿಗೆ ಕಲುಷಿತ ನೀರು ಕುಡಿಸಲಾಗುತ್ತದೆ ಎಂದು ಗಂಭೀರ ಆರೋಪ ಮಾಡಿದರು.

ಮನಪಾ ವಿಪಕ್ಷ ಸದಸ್ಯ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಕಲುಷಿತಗೊಂಡ ರಾಜ್ಯದ 13ನದಿಗಳ ಪಟ್ಟಿಯಲ್ಲಿ ದ.ಕ.ಜಿಲ್ಲೆಯ ನೇತ್ರಾವತಿ ನದಿಯೂ ಇದೆ. ನೇತ್ರಾವತಿಯ ನೀರು ಕಲುಷಿತಗೊಂಡಿದೆ ಎಂದು ವೈಜ್ಞಾನಿಕ ವರದಿ ಬಂದಿದೆ. ಶುದ್ಧಕರಿಸದ ನೀರು ನದಿಗೆ ಹರಿಸುವುದೇ ಇದಕ್ಕೆ ಕಾರಣ. ಇದೇ ನೀರನ್ನು ಸಂಸ್ಕರಿಸದೆ ಪೂರೈಸಲಾಗುತ್ತಿದೆ. ಇದರ ಅಧಿಕಾರಿಗಳ ಸ್ಪಷ್ಟನೆ ಬೇಡ ತನಿಖೆಗೆ ಆದೇಶಿಸಿ ಎಂದು ಮೇಯರ್ ಅವರನ್ನು ಒತ್ತಾಯಿಸಿದರು.

ಆದರೆ ಇದಕ್ಕೆ ಸ್ಪಷ್ಟನೆ ನೀಡಿಯ ಮೇಯರ್ ಮನೋಜ್ ಕುಮಾರ್, ಎಲ್ಲಾ ಎಸ್‌ಟಿಪಿ ಹಾಗೂ ಒಳಚರಂಡಿ ವ್ಯವಸ್ಥೆಗಳು ತುಂಬೆ ಡ್ಯಾಮ್‌ಗಿಂತ ಕೆಳ ಹಂತದಲ್ಲಿದೆ. ನಾವು ಮೇಲಿನ ನೀರನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ. ಆದರೆ ನೀರನ್ನು ಶುದ್ಧೀಕರಿಸದೆ ಪೂರೈಸಲಾಗುತ್ತದೆ ಎಂಬ ತಪ್ಪು ಮಾಹಿತಿ ನೀಡಬೇಡಿ‌. ನಮ್ಮ ಮನೆಗೂ ಅದೇ ನೀರು ಪೂರೈಕೆಯಾಗುವುದು ಎಂದು ಹೇಳಿದರು.

ಈ ಬಗ್ಗೆ ತನಿಖೆಗೆ ಮೇಯರ್ ಅವರು ಆದೇಶಿಸದ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಇದು ವಿಪಕ್ಷ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು‌. ಸದನದ ಬಾವಿಗಿಳಿದು ತಕ್ಷಣ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರು. ನದಿಯ ನೀರು ಯಾವುದೇ ರೀತಿ ಕಲುಷಿತಗೊಂಡಿಲ್ಲ ಶುದ್ಧವಿದೆ ಎಂದು ವೈಜ್ಞಾನಿಕ ವರದಿ ಬಂದಿದೆ ಎಂದು ಪರಿಷತ್ತು ಕಾರ್ಯದರ್ಶಿ ಶಿವಲಿಂಗಪ್ಪ ಹೇಳಿದಾಗ ಮತ್ತೆ ಸದನದ ಬಾವಿಗಿಳಿದ ವಿಪಕ್ಷ ಸದಸ್ಯರು ಫೇಕ್ ವರದಿ ಮಾಡಲಾಗಿದೆ ಎಂದು ಆರೋಪಿಸಿದರು. ಬಳಿಕ ಮೇಯರ್ ಅವರು ಮನಪಾ ಸದಸ್ಯರ ತಂಡ ಹೋಗಿ ಪರಿಶೀಲನೆ ನಡೆಸುವ ಭರವಸೆ ನೀಡಿದರು.

Edited By : Manjunath H D
PublicNext

PublicNext

04/01/2025 09:08 pm

Cinque Terre

50.1 K

Cinque Terre

0

ಸಂಬಂಧಿತ ಸುದ್ದಿ