ಬೈಂದೂರು: ಗಂಗೊಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗಂಗೊಳ್ಳಿಯ ಜನತೆ ತಿರಸ್ಕರಿಸಿ, ಕಾಂಗ್ರೆಸ್ ಹಾಗೂ SDPI ಪಕ್ಷವನ್ನು ಬೆಂಬಲಿಸಿದೆ. ಇದರಿಂದ ಬಿಜೆಪಿ ಪಕ್ಷದ ನಾಯಕರು ಹತಾಶೆಗೆ ಒಳಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಬ್ರೇಜ್ ಪ್ರತಿಕ್ರಿಯೆ ನೀಡಿದ್ದಾರೆ.
ಮೊನ್ನೆಯ ದಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಅಧಿಕಾರ ಸ್ವೀಕರಿಸಿದ ವೇಳೆ ಕಚೇರಿ ಒಳಗೆ ಗಣಹೋಮ ಮತ್ತು ನಮಾಜ್ ಮಾಡಿದ್ದೇವೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಜನತೆಯ ಅಭಿವೃದ್ಧಿಗಾಗಿ ನಮಾಜ್ ಪ್ರಾರ್ಥನೆ ಮಾಡಿದ್ದೇವೆ ಹೊರತು ಬೇರೆ ಯಾವುದೇ ದುರುದ್ದೇಶ ಇಲ್ಲ ಎಂದು ನೇರವಾಗಿ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
PublicNext
04/01/2025 03:36 pm