ಮೂಡಬಿದಿರೆ : ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಕಟ್ಟೆಯ ಆರಂತಬೆಟ್ಟು ಎಂಬಲ್ಲಿನ ಶೆಡ್ ವೊಂದರಲ್ಲಿ ಅಕ್ರಮ ಜೂಜಾಟವಾದ ಆಟವಾಡುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಪುತ್ತಿಗೆ ಪದವು ನಿವಾಸಿ ಶರೀಫ್(52), ಉಡುಪಿ ಮೂಡಲ್ ಬಂಡಸಾಲೆ ನಿವಾಸಿ ಸತೀಶ್ ಶೆಟ್ಟಿ(46), ಕಾಂತಾವರ ಗ್ರಾಮ ನಿವಾಸಿ ಜೀವಂದರ್(48), ಕಾರ್ಕಳ ಸಾಣೂರು ನಿವಾಸಿ ಸುನಿಲ್ ಕುಮಾರ್(43), ಬೆಳುವಾಯಿ ನಿವಾಸಿ ಜಗದೀಶ್ ಆಚಾರ್ಯ(43), ಕಾರ್ಕಳ ಗುಡ್ಡೆಯಂಗಡಿ ನಿವಾಸಿ ಮನೋಹರ ಸಾಲ್ಯಾನ್(56), ತೋಡಾರು ಮನೆ ನಿವಾಸಿ ಜಯರಾಮ ಶೆಟ್ಟಿ(53) ಎಂದು ಗುರುತಿಸಲಾಗಿದ್ದು ಆರೋಪಿಗಳಿಂದ 56,170 ರೂ.ನಗದು,8ಮೊಬೈಲ್ ಫೋನುಗಳು, ಕಾರು-1, 6 ಬೈಕ್ ಗಳು, ಆಟೋರಿಕ್ಷಾ-1, ಇಸ್ಪೀಟ್ ಕಾರ್ಡ್ ಗಳು, ಆಟಕ್ಕೆ ಉಪಯೋಗಿಸಿದ ಟೇಬಲ್ ಹಾಗೂ ಚೆಯರ್ ಗಳು ಹಾಗೂ ಇತರ ಸೊತ್ತುಗಳು ಸೇರಿ ಒಟ್ಟು 9.23 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್‌ಐ ಸುದೀಪ್ ಎಂ.ವಿ., ಎಎಸ್‌ಐ ಸುಜನ್ ಶೆಟ್ಟಿ ಹಾಗೂ ಸಿಸಿಬಿ ಸಿಬ್ಬಂದಿ ಭಾಗವಹಿಸಿದ್ದರು.
Kshetra Samachara
03/01/2025 03:17 pm