ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೃಷಿ ಲೋಕವನ್ನು ಸೃಷ್ಟಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳು..

ಮಂಗಳೂರು:ಗ್ರಾಮೀಣ ಭಾಗದ ಸರಕಾರಿ ಶಾಲೆಯ ಮಕ್ಕಳಿಗೆ ಕೊಂಚ ಪ್ರೋತ್ಸಾಹ ಕೊಟ್ಟು ಮಾರ್ಗದರ್ಶನ ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ ಎನ್ನುವುದಕ್ಕೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಗ್ರಾಮೀಣ ಪ್ರದೇಶವಾದ ಕೇರಳ ಕರ್ನಾಟಕ ಗಡಿಯಲ್ಲಿರುವ ಮಾಣಿಲ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಮಜಲಿನ ವಿದ್ಯಾರ್ಥಿಗಳೇ ಸಾಕ್ಷಿ.

ಮಾಣಿಲದ ಕಾಮಜಲಿನಲ್ಲಿ ೧೯೯೯ರಲ್ಲಿ ಆರಂಭವಾದ ಸರಕಾರಿ ಶಾಲೆ ೨೫ ಸಂವತ್ಸರಗಳನ್ನು ಪೂರೈಸುತ್ತಿದ್ದು ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.. ಹೀಗಾಗಿ ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿ ಎಂ.ಕೆ. ಕುಕ್ಕಾಜೆ ಅವರ ಗೌರವಾಧ್ಯಕ್ಷತೆ ಹಾಗೂ ನರಸಪ್ಪ ಬಾಳೆಕಲ್ಲು ಅಧ್ಯಕ್ಷತೆಯಲ್ಲಿ ಬೆಳ್ಳಿಹಬ್ಬದ ಸಮಿತಿ ರಚಿಸಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.. ಅದರಲ್ಲಿ ಶ್ರೀ ಕ್ಷೇತ್ರ ಕುಕ್ಕಾಜೆಯ ಶ್ರೀ ಕೃಷ್ಣ ಗುರೂಜಿ ವತಿಯಿಂದ ೨೫ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ತೀರಾ ಅಗತ್ಯವಾಗಿ ಬೇಕಾಗಿದ್ದ ತರಗತಿ ಕೊಠಡಿಯನ್ನು ಕೊಡುಗೆಯಾಗಿ ನೀಡಿದ್ದು, ಕಾಮಗಾರಿ ನಡೆಯುತ್ತಿದೆ. ಇನ್ನು ಜ.೨೫ ರಂದು ಬೆಳ್ಳಿ ಹಬ್ಬದ ಸಂಭ್ರಮದ ಕಾರ್ಯಕ್ರಮ ನಡೆಯಲಿದ್ದು ಕೊಠಡಿಯ ಉದ್ಘಾಟನೆಯೂ ಅಂದೇ ನಡೆಯಲಿದೆ.

ಬೆಳ್ಳಿಹಬ್ಬದ ಸಮಿತಿ, ಎಸ್ ಡಿಎಂಸಿ, ಶಿಕ್ಷಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪೋಷಕರು, ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಬೆಳ್ಳಿಹಬ್ಬದ ನೆನಪಿಗಾಗಿ ಸುಮಾರು ೨೫ ಸೆಂಟ್ಸ್ ಜಾಗವನ್ನು ಸಮತಟ್ಟುಗೊಳಿಸಿ ಆವರಣ ನಿರ್ಮಿಸಲಾಗಿದೆ. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಕೃಷಿ ತೋಟ ನಿರ್ಮಿಸಿದ್ದು, ಬೆಂಡೆಕಾಯಿ, ತೊಂಡೆಕಾಯಿ, ಬದನೆ, ಅಲಸಂಡೆ, ಬಸಳೆ, ಮೆಣಸಿನ ಗಿಡ, ೧೫೦ ರಷ್ಟು ಬಾಳೆ ಗಿಡ, ರಂಭೂಟನ್, ಡ್ರ್ಯಾಗನ್ ಫ್ರೂಟ್, ತೆಂಗಿನ ಗಿಡ, ಹಲಸಿನ ಗಿಡಗಳನ್ನು ಬೆಳೆಯಲಾಗಿದೆ. ಸದ್ಯ ಮಧ್ಯಾಹ್ನದ ಶಾಲೆಯ ಬಿಸಿಯೂಟಕ್ಕೆ ಇದರಿಂದಲೇ ತರಕಾರಿ ಹಾಗೂ ತೆಂಗಿನ ಕಾಯಿ ಬಳಸುತ್ತಿದ್ದು ಹೆಚ್ಚುವರಿ ತರಕಾರಿಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಗಿಡಗಳ ಆರೈಕೆ ಮಾಡಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಎಳವೆಯಲ್ಲೇ ಕೃಷಿಯ ಆಸಕ್ತಿ ಮೂಡಿಸುವುದರ ಜೊತೆಗೆ ಮಧ್ಯಾಹ್ನದ ಊಟಕ್ಕೂ ತಮ್ಮದೇ ಕೃಷಿ ತೋಟದಲ್ಲಿ ತರಕಾರಿ ಬೆಳೆಸುವ ಮೂಲಕ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಗ್ರಾಮೀಣ ಭಾಗದ ಸರಕಾರಿ ಶಾಲೆ ೨೫ ವರ್ಷಗಳನ್ನು ಪೂರೈಸುತ್ತಿರುವುದರ ಜೊತೆಗೆ ಅದನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿರುವುದು ಶ್ಲಾಘನೀಯವಾಗಿದೆ....

Edited By : Ashok M
PublicNext

PublicNext

05/01/2025 09:22 am

Cinque Terre

36.09 K

Cinque Terre

0

ಸಂಬಂಧಿತ ಸುದ್ದಿ