ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿದ್ಯಾರ್ಥಿಗಳಿಗಾಗಿ 21 ದಿವಸಗಳ ಕಾಲ ಐಸಿಯು ಹೊರಗಡೆ ಕಾದು ಕುಳಿತ ಶಿಕ್ಷಕ

ಮಂಗಳೂರು: ಶಿಕ್ಷಕನೆಂದರೆ ಕೇವಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವವನು ಮಾತ್ರವಲ್ಲ. ಮಾನವೀಯತೆಯೊಂದಿಗೆ ಅಕ್ಷರ ಜ್ಞಾನವನ್ನು ನೀಡುವವನೇ ನಿಜವಾದ ಶಿಕ್ಷಕ. ಇದಕ್ಕೆ ಉತ್ತಮ ಉದಾಹರಣೆ ಮೊಂಟೆಪದವು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಅವರು.

ಇತ್ತೀಚೆಗೆ ಮಂಜನಾಡಿ ಗ್ಯಾಸ್ ಸಿಲಿಂಡರ್ ದುರಂತ ಪ್ರಕರಣದಲ್ಲಿ ಇಹಲೋಕ ತ್ಯಜಿಸಿದ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಚೇತರಿಸಿಕೊಳ್ಳುತ್ತಿರುವ ಮತ್ತೋರ್ವಳು ವಿದ್ಯಾರ್ಥಿನಿ ಮೊಂಟೆಪದವು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗ್ಯಾಸ್ ದುರಂತ ಸಂಭವಿಸಿದ ದಿನದಿಂದ ಹಿಡಿದು 21ದಿನಗಳವರೆಗೆ ಮುಖ್ಯೋಪಾಧ್ಯಾಯ ಸಂತೋಷ್ ಅವರು ಆಸ್ಪತ್ರೆಯಲ್ಲಿ ಕುಟುಂಬಸ್ಥರೊಂದಿಗೆ ರಾತ್ರಿವರೆಗೆ ಇದ್ದು ಮಕ್ಕಳ ಆರೋಗ್ಯ ವಿಚಾರಿಸಿ ಮತ್ತೆ ಮನೆಗೆ ಹೋಗುತ್ತಿದ್ದರು. ಐಸಿಯುನೊಳಗಡೆ ಇದ್ದ ವಿದ್ಯಾರ್ಥಿನಿಯರೊಂದಿಗೆ ಮಾತನಾಡುತ್ತಾ ಅವರಿಗೆ ಧೈರ್ಯ ತುಂಬುತ್ತಿದ್ದರು.

ಅವರ ಧೈರ್ಯದ ಮಾತುಗಳಿಂದ ಮಕ್ಕಳು ಒಂದಿಷ್ಟು ದಿನ ಚೇತರಿಸಿಕೊಳ್ಳುವಂತಾಗಿತ್ತು. ಈ ವಿದ್ಯಾರ್ಥಿನಿಯರ ಚರ್ಮಕ್ಕೆ, ವೈದ್ಯಕೀಯ ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಆಗುತ್ತದೆ ಎಂದಾಗ, ತಕ್ಷಣ ಕಾರ್ಯ ಪ್ರವತ್ತರಾದ ಅವರು ನನ್ನಿಂದ ಸಾಧ್ಯವಾಗುವಷ್ಟು ಸಹಾಯ ಮಾಡುತ್ತೇನೆ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಅಲ್ಲದೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃoದದವರು, ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಒಂದು ಲಕ್ಷಕ್ಕಿಂತಲೂ ಹಣವನ್ನು ಒದಗಿಸಿದ್ದರು.

ಅಲ್ಲದೆ ಸಂತೋಷ್ ಅವರು ಡಿಡಿಪಿಐ ವೆಂಕಟೇಶ್ ಪಟಗಾರ್ ಅವರನ್ನು ಆಸ್ಪತ್ರೆಗೆ ಕರೆತಂದು ಮಕ್ಕಳ ಚಿಕಿತ್ಸೆಗಾಗಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೆ ಇಬ್ಬರು ವಿದ್ಯಾರ್ಥಿನಿಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಾಗ ಅವರ ದಫನ ಕಾರ್ಯ ಆಗುವವರೆಗೆ ಕುಟುಂಬದೊಂದಿಗೆ ಜೊತೆಯಾಗಿದ್ದರು. ಇಂತಹ ಮಾನವೀಯ ಮೌಲ್ಯಗಳನ್ನು ಹೊಂದಿರುವ ಶಿಕ್ಷಕರು ಇಂದು ಮರೆಯಾಗುತ್ತಿದ್ದರೂ, ಸಂತೋಷ್ ಅವರಂತಹ ಶಿಕ್ಷಕರು ಈಗಲೂ ಇದ್ದಾರೆ ಎಂಬುದು ಸಂತೋಷ ಪಡುವ ವಿಚಾರ.

Edited By : Nirmala Aralikatti
Kshetra Samachara

Kshetra Samachara

01/01/2025 06:23 pm

Cinque Terre

3.72 K

Cinque Terre

2

ಸಂಬಂಧಿತ ಸುದ್ದಿ