ಬ್ರಹ್ಮಾವರ : ಉಡುಪಿ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳ 21 ನೇ ಸಾಹಿತ್ಯ ಸಮ್ಮೇಳನ ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ನಾನಾ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬಾರಕೂರು ಸಂಕಮ್ಮ ತಾಯಿ ರೆಸಾರ್ಟ್ ನಲ್ಲಿ ಕಾರ್ಕಳ ಹಿರಿಯಂಗಡಿ ಎಸ್ ಎನ್ ವಿ ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಬ್ರೋವಿನ ಅಗೇರ ಸಮ್ಮೇಳನಾಧ್ಯಕ್ಷತೆಯಲ್ಲಿ ಶನಿವಾರ ಜರುಗಿತು.
ಅವರು ಈ ಸಂದರ್ಭ ಮಾತನಾಡಿ ಮಕ್ಕಳಲ್ಲಿ ಮಾನವೀಯ ಮೌಲ್ಯವನ್ನು ತುಂಬಿಸಲು ಮಕ್ಕಳ ಸಾಹಿತ್ಯ ಸಮ್ಮೇಳನಗಳು ಪೂರಕವಾಗುತ್ತದೆ ಎಂದರು. ಕಾರ್ಯಕ್ರಮದ ಪ್ರಧಾನ ಸಂಘಟಕ ರಾಮ ಭಟ್ಟ ಸಜಂಗದ್ದೆ ಪ್ರಾಸ್ತಾವಿಕ ಮಾತನಾಡಿ ಬಾರಕೂರಿನಲ್ಲಿ 21 ವರ್ಷದಹಿಂದೆ ಗ್ರಾಮ ಮಟ್ಟದಲ್ಲಿ ಆರಂಭಗೊಂಡ ಮಕ್ಕಳ ಸಾಹಿತ್ಯ ಸಮ್ಮೇಳನ ಇಂದು ಉಡುಪಿ ಜಿಲ್ಲಾ ಮಟ್ಟದಲ್ಲಿ ಬೆಳೆದು ಬಾರಕೂರಿನಲ್ಲಿ ರಾಜ್ಯಮಟ್ಟದ ಸಾಹಿತಿಗಳು ಬರುವಂತೆಆಗಿದೆ ಎಂದರು.
ಬೆಂಗಳೂರು ರಂಗ ನಟ ನಿರ್ದೇಶಕ ಎಸ್ ಎನ್ ಸೇತುರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಮಕ್ಕಳ ಸ್ವರಚಿತ ಕವನ ಸಂಕಲನವನ್ನು ರೋಟರಿ ರಾಜಾರಾಮ್ ಶೆಟ್ಟಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ನಾನಾ ಶಾಲೆಯಲ್ಲಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದವರನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ಹಚ್ಚೇವು ಕನ್ನಡದ ದೀಪ ನೃತ್ಯ, ಸ್ವಾಗತ, ಕಾರ್ಯಕ್ರಮ ನಿರೂಪಣೆ, ಸೇರಿದಂತೆ ಎಲ್ಲವೂ ಶಾಲಾ ಮಕ್ಕಳಿಂದಲೆ ನಡೆದ ಕಾರ್ಯಕ್ರಮ ನಾನಾ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಶಿಕ್ಷಕರ ಮೆಚ್ಚುಗೆ ಗಳಿಸಿತು.
ಹಿರಿಯ ಉಪನ್ಯಾಸಕ ಡಾ ಅಶೋಕ ಕಾಮತ್, ಡಾ ಶಶಿಕಾಂತ್ ಜೈನ್, ಶ್ರೀನಿವಾಸ್ ಶೆಟ್ಟಿಗಾರ್, ಕಿಶೋರ್ ಗೊನ್ಸಾಲ್ವೀಸ್, ಸೀತಾರಾಮ್ ತೋಳ್ಪಾಡಿತ್ತಾಯ, ಅಜಿತ್ ಕುಮಾರ್ ಶೆಟ್ಟಿ,ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಶಿವರಾಮ ಆಚಾರ್ಯ ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ
Kshetra Samachara
04/01/2025 07:05 pm