ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಆನ್‌ಲೈನ್ಠಾಧೀಶರು ತಮ್ಮ ಎರಡು ವರ್ಷದ ಪೂಜಾ ಅವಧಿಯನ್ನು ಭಗವದ್ಗೀತಾ ಪರ್ಯಾಯ ಎಂದು ಘೋಷಿಸಿದ್ದಾರೆ. ಭಗವದ್ಗೀತೆ ಕುರಿತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದೀಗ ಮೂಲಕ ಭಗವದ್ಗೀತೆ ಕಲಿಸುವ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ.
ಸ್ಥಳೀಯವಾಗಿ ಭಗವದ್ಗೀತೆಯ ತರಗತಿಗಳು ನಡೆಯುತ್ತಿದ್ದು, ವಿಶ್ವಾದ್ಯಂತ ಭಗವದ್ಗೀತೆಯ ಸಂದೇಶವನ್ನು ಪ್ರಚುರ ಪಡಿಸಲು ಈ ಆನ್‌ಲೈನ್ ತರಗತಿಗಳು ಸಹಾಯವಾಗಲಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಭಗವದ್ಗೀತೆಯ ಪ್ರಚಾರದ ಮೂಲಕ ಗೀತಾಚಾರ್ಯ ಕೃಷ್ಣನ ಪೂಜೆಯನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
PublicNext
02/01/2025 05:33 pm