ಮುಲ್ಕಿ: ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತ್ ಗೆ ಐದನೇ ಹಣಕಾಸು ಆಯೋಗದ ಭೇಟಿ ಹಾಗೂ ಪರಿಶೀಲನಾ ಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಮಾಜಿ ಸಂಸದ ಹಾಗೂ ಐದನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಸದಸ್ಯರು ಸರಕಾರದ ಸವಲತ್ತುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನೀಡಲು ಪ್ರಯತ್ನಿಸಿ ಗ್ರಾಮದಲ್ಲಿ ಸ್ವಚ್ಛ ಪ್ರಾಮಾಣಿಕತೆಯ ಆಡಳಿತ ನೀಡಿ ಮಾದರಿಯಾಗಿ ಎಂದರು.
ಈ ಸಂದರ್ಭ ಆಯೋಗದ ಸದಸ್ಯರಾದ ಮೊಹಮ್ಮದ್ ಸನವುಲ್ಲಾ, ಆರ್.ಎಸ್.ಪೊoಡೆ, ಸಮಾಲೋಚಕರಾದ ಕೆಂಪೇಗೌಡ, ಸುಪ್ರಸನ್ನ ವಿಶೇಷ ಅಧಿಕಾರಿ ವಹಾಬ್, ಯಾಲಕ್ಕಿ ಗೌಡ್ರು, ಮಂಗಳೂರು ತಾಲೂಕು ಪಂಚಾಯತ್ ನ ಮಹೇಶ್ವರ ಭಟ್, ಮುಲ್ಕಿ ತಾಲೂಕ್ ಪಂಚಾಯತಿ ಇಒ ಕುಸುಮಾಧರ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ, ಉಪಸ್ಥಿತರಿದ್ದರು.
ಪಂಚಾಯತ್ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಪಂಚಾಯತ್ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಸದಸ್ಯರಾದ ಸುರೇಶ್ ಪಂಜ,ನವೀನ್ ಸಾಲ್ಯಾನ್ ರವರು ಪಂಚಾಯತ್ ಗಳಿಗೆ ಅನುದಾನದ ಕೊರತೆ, ಪ್ರಾಕೃತಿಕ ವಿಕೋಪನಿಧಿ ಹೆಚ್ಚಳ, ನರೇಗಾದಲ್ಲಿ ಕೃಷಿಗೆ ಪ್ರಾಶಸ್ತ್ಯ, ನರೇಗಾಕೂಲಿ ಬೆಲೆ ಹೆಚ್ಚಳ,ಕುಡಿಯುವ ನೀರಿನ ಪರಿಹಾರಕ್ಕೆ ಅಣೆಕಟ್ಟು ನಿರ್ಮಾಣ, ಎಸ್ಸಿ ಎಸ್ಟಿ ಗಳಿಗೆ ಸವಲತ್ತು, ಮಳೆಗಾಲದಲ್ಲಿ ನೆರ ನಿಯಂತ್ರಣಕ್ಕೆ ತಡೆಗೋಡೆ, ಪಂಚಾಯತ್ ನಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಬೇಡಿಕೆ ನೀಡಿದರು. ಪಂಚಾಯತ್ ಲೆಕ್ಕಿಗ ಕೇಶವ, ಹಾಗೂ ಪಂಚಾಯತ್ ಸದಸ್ಯರು ಮಾಹಿತಿ ನೀಡಿದರು.
Kshetra Samachara
04/01/2025 04:10 pm