ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಯುವಕರಿಂದ ಅಂಗರಗುಡ್ಡೆ - ಶಿಮಂತೂರು ರಸ್ತೆ ಬದಿ ತ್ಯಾಜ್ಯ ರಾಶಿ ತೆರವು

ಮುಲ್ಕಿ: ಅಂಗರಗುಡ್ಡೆಯಿಂದ ಶಿಮಂತೂರು ರಸ್ತೆಯಲ್ಲಿ ರಾಶಿ ರಾಶಿ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆಲ ದುಷ್ಕರ್ಮಿಗಳು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಈ ಬಗ್ಗೆ ಅನೇಕ ಬಾರಿ ಪಬ್ಲಿಕ್ ನೆಕ್ಸ್ಟ್ ಸಹಿತ ಅನೇಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು

ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅಂಗರಗುಡ್ಡೆ ಯುವಕರ ತಂಡ ಕಿಶೋರ್ ದೇವಾಡಿಗ, ಗಣೇಶ್ ಪೂಜಾರಿ, ಆನಂದ್ ಗುಜರನ್ ನೇತೃತ್ವದಲ್ಲಿ ಸ್ವಚ್ಛತೆಯ ಕಡೆ ನಮ್ಮ ನಡೆ ಧ್ಯೇಯದೊಂದಿಗೆ ಸ್ವಯಂ ಪ್ರೇರಣೆಯಿಂದ ತ್ಯಾಜ್ಯ ತೆರವುಗೊಳಿಸಿದ್ದಾರೆ.

ಇದೇ ರೀತಿ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ಕೆಂಚನಕೆರೆ ಪರಿಸರದಲ್ಲಿ ಕೆಲ ದುಷ್ಕರ್ಮಿಗಳು ಸಿ ಸಿ ಕ್ಯಾಮೆರಾ ಇದ್ದರೂ ತ್ಯಾಜ್ಯ ಎಸೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

05/01/2025 12:30 pm

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ