ಮಂಗಳೂರು: ತಲಪಾಡಿ ಟೋಲ್‌ಗೇಟ್ ಅಧಿಕಾರಿಗಳ ತಾರತಮ್ಯ ನೀತಿ ಹಾಗೂ ಸಿಬಂದಿ ವಿರುದ್ಧ ಮಂಜೇಶ್ವರ ಟೋಲ್‌ಗೇಟ್ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಜ. 8ರಂದು ಸಂಜೆ ತಲಪಾಡಿ ಟೋಲ್ ಗೇಟ್ ಪರಿಸರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಟೋಲ್ ಗೇಟ್ ಕ್ರಿಯಾ ಸಮಿತಿ ಸಂಚಾಲಕ ಅಬ್ದುಲ್ ರಹೀಂ ಕುಂಜತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಲಪಾಡಿ ಟೋಲ್‌ಗೇಟ್ ಸ್ಥಾಪನೆಗೊಂಡ ಆರಂಭದಲ್ಲಿ ಕೇರಳ ಕರ್ನಾಟಕದ ಸ್ಥಳೀಯ ಐದು ಕಿಲೋ ಮೀಟರ್ ಸುತ್ತಳತೆ ಯಲ್ಲಿರುವ ನಿವಾಸಿಗಳಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಕ್ರಮೇಣ ಇದು ಕೇವಲ ಕರ್ನಾಟಕದ
ಸ್ಥಳೀಯರಿಗೆ ಮಾತ್ರ ಸೀಮಿತವಾಗಿ ಕೇರಳದವರಿಗೆ ವಿನಾಯಿತಿ * ರದ್ದು ಪಡಿಸಿ ಈ ಭಾಗದಿಂದ ತೆರಳುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ.
ಅಧಿಕಾರಿಗಳ ಈ ತಾರತಮ್ಯ ವಿರೋಧಿಸಿ ಪ್ರತಿಭಟನ ಧರಣಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಟೋಲ್‌ಗೇಟ್ ಅಧಿಕಾರಿಗಳಿಂದ ಇದಕ್ಕೊಂದು ಸಕಾರಾತ್ಮಕ ರೀತಿಯ ಪ್ರತಿಕ್ರಿಯೆ ಲಭಿಸದೇ ಇದ್ದಲ್ಲಿ ಕಾನೂನಾತ್ಮಕ ರೀತಿಯಲ್ಲಿ ಪ್ರತಿಭಟನೆಯ ಸ್ವರೂಪವನ್ನು ಬದಲಿಸಿ ಉಪವಾಸ ಸತ್ಯಾಗ್ರಹ ರೀತಿಯ ಚಳವಳಿಗೂ ಮುಂದಾಗಲಿರುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ. ಟೋಲ್‌ಗೇಟ್ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಅಶ್ರಫ್ ಕುಂಜತ್ತೂರು, ಜಬ್ಬಾರ್ ಪದವು ಹಾಗೂ ಅಶ್ರಫ್ ಬಡಾಜೆ ಉಪಸ್ಥಿತರಿದ್ದರು.
Kshetra Samachara
07/01/2025 08:55 pm