ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಾಲಿಕೆ ವಿಸ್ತರಣೆ - ಉಳ್ಳಾಲ ಸೇರ್ಪಡೆ ಸಾಧ್ಯತೆ?

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಣೆ ಗೊಳಿಸಿ ಇದಕ್ಕೆ ಗಡಿ ಭಾಗದ ನೀರು ಮಾರ್ಗ, ಕೊಣಾಜೆ, ಉಳ್ಳಾಲವನ್ನು ಸೇರ್ಪಡೆ ಗೊಳಿಸಿ "ಗ್ರೇಟರ್ ಮಂಗಳೂರು" ಎಂಬ ಹೊಸ ಅಸ್ತಿತ್ವ ಹುಟ್ಟು ಹಾಕುವ ಬಗ್ಗೆ ಪ್ರಸ್ತಾವನೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ಇಂಬುಕೊಡುವ ಹಾಗೆ ಈ ಬಾರಿ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆ ನಿಗದಿತ ಸಮಯಕ್ಕೆ ನಡೆಯುವುದು ಕೂಡ ಅನುಮಾನವಾಗಿದೆ. ಎಲ್ಲವೂ ಅಂದು ಕೊಂಡ ಹಾಗೆಯೆ ನಡೆದರೆ 31 ಸದಸ್ಯರುಗನ್ನೊಳಗೊಂಡ ಉಳ್ಳಾಲ ನಗರ ಸಭೆಯ ಅಸ್ತಿತ್ವ ಈಗಿನ ಆಡಳಿತ ದೊಂದಿಗೆ ಕೊನೆ ಗೊಳ್ಳಲಿದೆ. ಮಂಗಳೂರು ಮಹಾನಗರ ಪಾಲಿಕೆ ಯೊಂದಿಗೆ ಉಳ್ಳಾಲದ ವಿಲೀನ ಪ್ರಕ್ರಿಯೆ ನಡೆದರೆ ಈಗಿನ ಉಳ್ಳಾಲದ 31ವಾರ್ಡ್ - ಸದಸ್ಯರುಗಳ ಬದಲಿಗೆ ಕೇವಲ 9 ವಾರ್ಡ್ ಗಳಿಂದ 9 ಕಾರ್ಪೊಪರೇಟರ್ಸ್ ಗಳು ಮಾತ್ರ ಉಳ್ಳಾಲವನ್ನು ಪ್ರತಿನಿಧಿಸುತ್ತಾರೆ.

ಗ್ರೇಟರ್ ಮಂಗಳೂರು" ಕಾರ್ಪೊಪರೇಟರ್ಸ್ ಗಳಿಗೆ ಹೆಚ್ಚಿನ ಪವರ್,ಘನತೆ ಇರುವುದರಿಂದ ಉಳ್ಳಾಲ ದಿಂದ ಕಾರ್ಪೊಪರೇಟರ್ ಆಗಲು ಭಾರೀ ಪೈಪೋಟಿ, ಲಾಬಿ, ನಡೆಯಲಿದೆ. ಯೋಗ ಇದ್ದವರು ಗ್ರೇಟರ್ ಮಂಗಳೂರು" ಮೇಯರ್ ಕೂಡ ಆಗ ಬಹುದು

Edited By : PublicNext Desk
Kshetra Samachara

Kshetra Samachara

08/01/2025 06:22 am

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ