ಮುಲ್ಕಿ: ಗೋಸೇವಾ ಗತಿ ವಿದಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ಬಂಟ್ವಾಳ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಂದಿ ರಥಯಾತ್ರೆಯು ಮುಲ್ಕಿ ಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಮುಲ್ಕಿ ಶಿವಾಜಿ ಮಂಟಪ ಬಳಿ ಸಂಜೆ 5:00 ಗಂಟೆಗೆ ಗೋವಿಗೆ ವಿಶೇಷ ಪೂಜೆ ಸಲ್ಲಿಸಿ ನಂದಿ ರಥ ಯಾತ್ರೆಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ರಥಯಾತ್ರೆಯುಮುಲ್ಕಿ ಶಿವಾಜಿ ಮಂಟಪ ದಿಂದ ಬಪ್ಪನಾಡು ದೇವಸ್ಥಾನಕ್ಕೆ ತಲುಪಿ ದೇವಸ್ಥಾನದಲ್ಲಿ ಗೋಪೂಜೆ
ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಪ್ರಮುಖರಾದ ವೈ ಎನ್ ಸಾಲ್ಯಾನ್, ಉಮೇಶ್ ಪಂಜ, ಸುನಿಲ್ ಆಳ್ವ, ಕಸ್ತೂರಿ ಪಂಜ, ದೇವಪ್ರಸಾದ್ ಪುನರೂರು,ಮಹಿಮ್ ಹೆಗ್ಡೆ,ವಿಠ್ಠಲ್ ಎನ್ ಎಂ, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಕಿಶೋರ್ ಸಾಲ್ಯಾನ್, ಪುರುಷೋತ್ತಮರಾವ್, ಜೀವನ್ ಪೂಜಾರಿ ಕೊಲ್ನಾಡು, ಸಾಧು ಅಂಚನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/01/2025 06:23 pm