ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 2025ನೇ ಸಾಲಿನ ಉಡುಪ-ಹಂದೆ ಪ್ರಶಸ್ತಿಗೆ ಹೆರೆಂಜಾಲು ಗೋಪಾಲ ಗಾಣಿಗ, ಶ್ರೀಪಾದ ಭಟ್ ಆಯ್ಕೆ

ಉಡುಪಿ: ಐವತ್ತರ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಯಕ್ಷಗಾನದಲ್ಲಿ ವಿಶ್ವ ಖ್ಯಾತಿ ಪಡೆದಿರುವ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರೂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ ಆಗಿರುವ ದಿ.ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರ ಹಂದೆ ಹೆಸರಿನ 2025ರ ಸಾಲಿನ 'ಉಡುಪ-ಹಂದೆ ಪ್ರಶಸ್ತಿ'ಗೆ ಯಕ್ಷಗಾನದ ಪ್ರಸಿದ್ಧ ಭಾಗವತರಾದ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ರಾಷ್ಟ್ರೀಯ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಭಾಜನರಾಗಿದ್ದಾರೆ.

ಕುಂದಾಪುರ ತಾಲೂಕಿನ ನಾಗೂರಿನ ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರು, ತಂದೆ ವೆಂಕಟರಮಣ ಗಾಣಿಗರಿಂದ ಬಳುವಳಿಯಾಗಿ ಬಂದ ಯಕ್ಷ ಸಂಪತ್ತನ್ನು ವಿಸ್ತರಿಸಿಕೊಳ್ಳುವಲ್ಲಿ ಡಾ.ಶಿವರಾಮ ಕಾರಂತರ ನಿರ್ದೇಶನದ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿ, ಗುರು ನೀಲಾವರ ರಾಮಕೃಷ್ಣಯ್ಯ ಮಹಾಬಲ ಕಾರಂತರ ಗರಡಿಯಲ್ಲಿ ಪಳಗಿ ಹಿಮ್ಮೇಳ ಮತ್ತು ಮುಮ್ಮೇಳಗಳಲ್ಲಿ ಸಾಧನೆ ಮಾಡಿದವರು.

ಡಾ.ಶಿವರಾಮ ಕಾರಂತರ ಯಕ್ಷ ಬ್ಯಾಲೆ ತಂಡದ ಮೂಲಕ ರಷ್ಯ, ಲಂಡನ್, ಪ್ರಾನ್ಸ್, ಕುವೈತ್ ಮೊದಲಾದೆಡೆ ಯಕ್ಷ ಕಂಪನ್ನು ಪಸರಿಸಿದವರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ನಿರ್ದೇಶಕ ಬಿ.ವಿ. ಕಾರಂತರ ಶಾಕುಂತಲ ನೃತ್ಯ ನಾಟಕಕ್ಕೆ ಯಕ್ಷ ನೃತ್ಯವನ್ನು ನಿರ್ದೇಶಿಸಿದವರು. ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಮಂದರ್ತಿ, ಸಾಲಿಗ್ರಾಮ, ಶಿರಸಿ, ಸೌಕೂರು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಪೌರಾಣಿಕ ಮತ್ತು ಆಧುನಿಕ ಪ್ರಸಂಗಗಳಲ್ಲಿ ಸೈ ಎನಿಸಿಕೊಂಡವರು.

ಶ್ರೀಪಾದ ಭಟ್‌ ಅವರು ಪ್ರೌಢ ಶಾಲಾ ಅಧ್ಯಾಪನದೊಂದಿಗೆ ಸುಮಾರು ನಲ್ವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೃಷಿ ಮಾಡಿದವರು. ಜನಪದ ರಂಗ ಭೂಮಿ, ಯಕ್ಷಗಾನ ಹಾಗೂ ಆಧುನಿಕ ರಂಗಭೂಮಿ ಕುರಿತ ಸಂಶೋಧನೆಗಾಗಿ ಪಿಎಚ್‌ಡಿ ಪದವಿ ಪಡೆದವರು.

Edited By : PublicNext Desk
Kshetra Samachara

Kshetra Samachara

04/01/2025 08:05 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ