ಚಿತ್ರದುರ್ಗ: ಸರ್ಕಾರ ಘೋಷಿಸಿದ ಯುವನಿಧಿ ಯೋಜನೆಯ ಭಾಗ್ಯ ಸಿಗದೇ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ. ಕಳೆದ 11 ತಿಂಗಳಿಂದ ಯುವನಿಧಿ ಸಿಗದೇ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.
ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳಿಗೆ ಯುವನಿಧಿ ಸ್ಕಿಮ್ ಇದುವರೆಗೂ ಸಿಕ್ಕಿಲ್ಲ. 2023ರ ಶೈಕ್ಷಣಿಕ ವರ್ಷದ ಪಾಸ್ಡ್ ಔಟ್ ಬ್ಯಾಚ್ ವಿದ್ಯಾರ್ಥಿಗಳ ಪರದಾಟ ಸ್ಥಿತಿ ನಿರ್ಮಾಣವಾಗಿದೆ. ಶೈಕ್ಷಣಿಕ ದಾಖಲೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಲಭ್ಯವಿಲ್ಲ ಎಂಬ ಕಾರಣ, ಯುವನಿಧಿಗೆ ಅಪ್ಲಿಕೇಶನ್ ಹಾಕೋಕೆ ಆಗದೇ ವಿದ್ಯಾರ್ಥಿಗಳ ಹೈರಾಣಾಗಿದ್ದಾರೆ. 2023 ಶೈಕ್ಷಣಿಕ ವರ್ಷದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗೋಳು ಇದಾಗಿದೆ. ತಾಂತ್ರಿಕ ತೊಂದರೆ ಎಂಬ ಸಬೂಬು ಹೇಳಿ ವಿದ್ಯಾರ್ಥಿಗಳನ್ನು ಪರದಾಡಸ್ತಿದಾರೆ ಅಂತಾ ವಿಧ್ಯಾರ್ಥಿಗಳು ಆರೋಪಿಸಿದ್ದಾರೆ. ಕಾಲೇಜು, ನ್ಯಾಡ್, ವಿಶ್ವವಿದ್ಯಾಲಯ ಗೊಂದಲ ಮಧ್ಯೆ ವಿದ್ಯಾರ್ಥಿಗಳಿಗೆ ಯುವನಿಧಿ ಮರೀಚಿಕೆಯಾಗಿದ್ದು, ಇದಕ್ಕೆ ಕಾಂಗ್ರೆಸ್ ಸರಕಾರ ಗ್ಯಾರಂಟಿ ಕೊಟ್ಟಿದೆ, ಆದ್ರೆ ಅನುಷ್ಠಾನಕ್ಕೆ ತರೋರ್ಯಾರು ಎನ್ನುವಂತಾಗಿದೆ.
PublicNext
02/01/2025 08:40 am