ಚಿತ್ರದುರ್ಗ: BJP ಅಧಿಕಾರದಲ್ಲಿ ಇದ್ದಾಗ ಎಷ್ಟು ಕರ್ಮಕಾಂಡ ಮಾಡಿದ್ದಾರೆ ಎಂದು ಒಮ್ಮೆ ನೆನಪು ಮಾಡಿಕೊಳ್ಳಬೇಕು ಎಂದು ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ದಕ್ಷತೆಯಿಂದ ನಮ್ಮ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಚಿನ್ ಆತ್ಮಹತ್ಯೆ ಕೇಸ್ ಸಿಎಂ ಸಿದ್ದರಾಮಯ್ಯ ಅವರು SIT ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಕೂಡಾ ತನಿಖೆಯಲ್ಲಿ ಬಯಲಾಗುತ್ತದೆ ಎಂದರು.
ಇನ್ನೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿಷಯ ಬೇರೆ, ಪ್ರಿಯಾಂಕ್ ಖರ್ಗೆ ಪ್ರಕರಣ ಬೇರೆ…ಈಶ್ವರಪ್ಪ ಅವರ ಹೆಸರು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿತ್ತು. ಆದರೆ ಪ್ರಿಯಾಂಕ್ ಖರ್ಗೆ ಕೇಸ್ ನಲ್ಲಿ ಅವರ ಹೆಸರು ಉಲ್ಲೇಖ ಆಗಿಲ್ಲ. ಸತ್ಯ ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಬಳಿಕ ಸಚಿವ ಸಂಪುಟ ಪುನರ್ ರಚನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಸಚಿವ ಸಂಪುಟದ ಪುನರ್ ರಚನೆ ಕುರಿತು ನನಗೆ ಗೊತ್ತಿಲ್ಲ, ಇದು AICC ಅಧ್ಯಕ್ಷರು, KPCC ಅಧ್ಯಕ್ಷರು, ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.
PublicNext
04/01/2025 02:50 pm