ಮೈಸೂರು : ಶಿಕ್ಷಕಿಯಾಗಲು ಬಿಎಡ್ ಕಾಲೇಜ್ ಗೆ ಸೇರಿದ ಯುವತಿ ಪಾಠ ಹೇಳಿಕೊಟ್ಟ ಗುರುವಿನ ಜೊತೆಗೆ ಓಡಿ ಹೋಗಿ ಮದುವೆ ಆದ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ. ಮನೆಯವರ ವಿರೋಧ ಲೆಕ್ಕಿಸದೆ ತನಗಿಂತ 15 ವರ್ಷ ಹಿರಿಯನಾದ ಲೆಕ್ಚರ್ ನ್ನ ಮದುವೆ ಆಗಿದ್ದಲ್ಲದೆ ರಕ್ಷಣೆ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಮಗಳ ವರ್ತನೆಗೆ ಬೇಸತ್ತ ಪೋಷಕರು ಶಾಕ್ ಗೆ ಒಳಗಾಗಿದ್ದಾರೆ. ಮಗಳ ಯೋಚನೆಯಲ್ಲಿ ತಂದೆ ಹಾಸಿಗೆ ಹಿಡಿದಿದ್ದಾರೆ.
ಹುಣಸೂರು ಪಟ್ಟಣದ ನಿವಾಸಿ ಪೂರ್ಣಿಮ(24) ಎಂಎ ಮುಗಿಸಿ ಬಿಎಡ್ ಗಾಗಿ ಹುಣಸೂರಿನ ಮಹಾವೀರ್ ಕಾಲೇಜ್ ಆಫ್ ಎಜುಕೇಷನ್ ಗೆ ಸೇರಿದ್ದಾಳೆ. ಪಾಠ ಕಲಿಯುವ ಜೊತೆಗೆ ಲೆಕ್ಚರರ್ ಯಶೋದಕುಮಾರ್(39) ಜೊತೆ ಲವ್ವಿಡವ್ವಿ ಶುರುವಾಗಿದೆ. ಈ ವಿಚಾರ ಮನೆಯವರ ಗಮನಕ್ಕೆ ಬಂದಿದೆ. ಇಬ್ಬರು ಪ್ರೇಮಿಗಳು ಮದುವೆ ಆಗಲು ತೀರ್ಮಾನಿಸಿದ್ದಾರೆ. ಪೂರ್ಣಿಮ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಕಾಲೇಜಿಗೆ ಹೋಗದಂತೆ ತಡೆ ಒಡ್ಡಿದ್ದಾರೆ. ಆದ್ರೆ ಮೊಬೈಲ್ ನಲ್ಲೇ ಇವರ ಪ್ರೇಮಕತೆ ಮುಂದುವರೆದಿದೆ. ಡಿ.26 ರಂದು ಸರ್ಟಿಫಿಕೇಟ್ ತರುವುದಾಗಿ ತಿಳಿಸಿ ಮನೆ ಬಿಟ್ಟ ಪೂರ್ಣಿಮ ಹಿಂದಿರುಗಿಲ್ಲ.
ಮೊಬೈಲ್ ನಲ್ಲಿ ಮದುವೆ ಆಗಿರುವುದಾಗಿ ಮೆಸೇಜ್ ಹಾಕಿದ್ದಾಳೆ. ನಮ್ಮಿಬ್ಬರಿಗೂ ತೊಂದರೆ ನೀಡಬಾರದೆಂಬ ಉದ್ದೇಶದಿಂದ ರಕ್ಷಣೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾಳೆ. ಮಕ್ಕಳಿಗೆ ಪಾಠ ಹೇಳಿಕೊಟ್ಟು ಬುದ್ದಿ ಕಲಿಸಬೇಕಿದ್ದ ಶಿಕ್ಷಕರೇ ಹಾದಿ ತಪ್ಪಿದ್ದಾರೆ.
ಬೀದಿಬದಿ ಸೊಪ್ಪುಮಾರಿ 2 ಲಕ್ಷ ಸಾಲ ಮಾಡಿ ಕಾಲೇಜ್ ಗೆ ಸೇರಿಸಿದ ಮಗಳು ಮಾಡಿದ ಕೆಲಸಕ್ಕೆ ಹೆತ್ತವರು ಶಾಕ್ ಆಗಿದ್ದಾರೆ. ಪಾಠ ಹೇಳಿಕೊಡಬೇಕಾದ ಗುರುವಿನ ಕೆಲಸ ಇದೇನಾ ಎಂದು ತಾಯಿ ಮಹದೇವಮ್ಮ ಹಿಡಿ ಶಾಪ ಹಾಕುತ್ತಿದ್ದಾರೆ. ಹಾಸಿಗೆ ಹಿಡಿದ ತಂದೆ ಸಜ್ಜೇಗೌಡ ಎರಡು ಲಕ್ಷ ಸಾಲ ಮಾಡಿ ಓದಿಸಿ ಮುಂದಿನ ದಿನಗಳಲ್ಲಿ ನಮ್ಮ ನೆರವಿಗೆ ಬರುತ್ತಾಳೆ ಎಂದುಕೊಂಡ್ರೆ ಹೀಗಾ ಮಾಡೋದು ಎಂದು ನೊಂದಿದ್ದಾರೆ. ಒಟ್ಟಾರೆ ಪೂರ್ಣಿಮಾ ಕೊಟ್ಟ ಶಾಕ್ ಸಜ್ಜೇಗೌಡ ಕುಟುಂಬದಲ್ಲಿ ಬಿರುಗಾಳಿ ಬೀಸಿದಂತಾಗಿದೆ.
PublicNext
31/12/2024 10:54 pm