ಮೈಸೂರು: ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ನಾಲ್ವರು ಮುಸುಕುಧಾರಿಗಳು ಹಲ್ಲೆ ನಡೆಸಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಸಣ್ಣಕುಮಾರ ಎಂಬ ಹೆಸರನ್ನು ಬಳಸಿದ ಮುಸುಕುಧಾರಿಗಳು ಹಲ್ಲೆ ನಡೆಸಿದ್ದಾರೆ. ಹೆಚ್.ಡಿ ಕೋಟೆಯ ಮೊತ್ತ ಗೇಟ್ ಕಡೆಯಿಂದ ಎರಡು ಬೈಕ್‌ಗಳಲ್ಲಿ ಬಂದು ಏಕಾಏಕಿ ದಾಳಿ ನಡೆಸಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದ ಮಂಜು ಎಂಬಾತರೇ ಹಲ್ಲೆಗೊಳಗಾದ ರೈತ.
ದಾಳಿಯಿಂದ ತಪ್ಪಿಸಿಕೊಳ್ಳಲು ರಸ್ತೆ ಮಧ್ಯದಲ್ಲಿರುವ ಡಕ್ ಪೈಪಿನೊಳಗೆ ಸೇರಿಕೊಂಡರೂ ಬಿಡದೆ ಹೊರಗೆಳೆದು ಮನಸೋ ಇಚ್ಛೆ ತುಳಿದು ಹಲ್ಲೆ ನಡೆಸಿದ್ದಾರೆ. ಘಟನೆ ಬಳಿಕ ಕುಟುಂಬಸ್ಥರಿಗೆ ಕರೆ ಮಾಡಿದ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭೂಮಿ ವಿವಾದದ ಹಿನ್ನಲೆ ಜಮೀನು ಮಾಲೀಕರಿಗೆ ಸಣ್ಣಕುಮಾರ ಎಂಬಾತ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ. ಆರೋಪಿಯನ್ನ ಅರೆಸ್ಟ್ ಮಾಡುವಂತೆ ಗ್ರಾಮಸ್ಥರು ನಿನ್ನೆ ಮೌನ ಪ್ರತಿಭಟನೆ ನಡೆಸಿದ್ದರು. ಇದೀಗ ಆರೋಪಿ ಸಣ್ಣಕುಮಾರ ಹೆಸರು ಬಳಸಿರುವ ಮುಸುಕುಧಾರಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
31/12/2024 05:20 pm