ಮೈಸೂರು: ಎಲ್ಐಸಿ ಹಣದ ಆಸೆಗಾಗಿ ಹೆತ್ತ ಅಪ್ಪನನ್ನೇ ಕೊಂದ ಮಗ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತಂದೆಯ ಸಾವಿನ ಹಿನ್ನಲೆ ಬೇಸತ್ತ ಸಹೋದರ ನೇಣಿಗೆ ಶರಣಾಗಿದ್ದಾನೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು , ಪಾಂಡು ತಂದೆಯನ್ನ ಕೊಂದ ಪಾಪಿ ಮಗ.
ಅಪ್ಪ ಹಾಗೂ ಅಣ್ಣನ ಹೆಸರಲ್ಲಿ ಪಾಂಡು ವಿಮೆ ಮಾಡಿಸಿದ್ದ. ಇನ್ಶುರೆನ್ಸ್ ಹಣಕ್ಕಾಗಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಅಪ್ಪನನ್ನ ಟಿಬೇಟಿಯನ್ ಕ್ಯಾಂಪಿನಲ್ಲಿ ಕೆಲಸ ಇದೆ ಹೋಗು ಅಂತಾ ಕಳುಹಿಸಿ ಹಿಂಬದಿಯಿಂದ ಹಿಂಬಾಲಿಸಿ ದೊಣ್ಣೆಯಿಂದ ತಲೆಗೆ ಹೊಡೆದು ಅಪಘಾತವೆಂಬಂತೆ ಬಿಂಬಿಸಿ ಬಿ ಎಂ ರಸ್ತೆಯ ಮಂಚ ದೇವನಹಳ್ಳಿ ಸಮೀಪ ಶವ ಬಿಸಾಡಿದ್ದ.
ನಂತರ ಬೈಲುಕುಪ್ಪೆ ಪೊಲೀಸರಿಗೆ ನಮ್ಮ ಅಪ್ಪನಿಗೆ ಅಪರಿಚಿತವಾದ ವಾಹನ ಡಿಕ್ಕಿಯಾಗಿ ಸಾವನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದ. ಘಟನೆಯಿಂದ ಅನುಮಾನಗೊಂಡು ತನಿಖೆ ನಡೆಸಿದ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡ. ಪಾಂಡು ಸಂಚು ಬಯಲಾಗಿದೆ. ವಿಚಾರಣೆ ನಡೆಸಿದಾಗ ಆರೋಪಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ.
ನನ್ನ ತಂದೆ ಹೆಸರಿನಲ್ಲಿ ಇನ್ಸೂರೆನ್ಸ್ ವಿಮೆಯಿದೆ ಅಪಘಾತದಲ್ಲಿ ಸಾವನಪ್ಪಿದ್ರೆ ಡಬಲ್ ಹಣ ಸಿಗುವ ಆಸೆಯಲ್ಲಿ ಈ ಕೃತ್ಯ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅಣ್ಣನಾದ ಧರ್ಮ ಕೂಡ ನೇಣಿಗೆ ಶರಣಾಗಿದ್ದಾನೆ. ಆರೋಪಿಯನ್ನ ವಶಪಡಿಸಿಕೊಂಡಿರುವ ಬೈಲುಕೊಪ್ಪೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
27/12/2024 05:42 pm