ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಪೊಲೀಸರ ವಿರುದ್ಧವೇ FIR

ಮೈಸೂರಿನ ಮಂಡಿ‌ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬರೋಬ್ಬರಿ ನಾಲ್ಕು ವರ್ಷದ ಬಳಿಕ ಪೊಲೀಸರ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ.

ಅದೇ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಪೊಲೀಸ್ ವಿರುದ್ಧ ಅದೇ ಠಾಣೆಯಲ್ಲಿ ಎಫ್‌ಐಆರ್ ಆಗಿದೆ. ಇನ್ಸ್‌ಪೆಕ್ಟರ್ ಆಗಿದ್ದ ನಾರಾಯಣಸ್ವಾಮಿ ಸೇರಿ ಮೂವರ ವಿರುದ್ಧ FIR ಆಗಿದೆ. ರವಿ @ ಮುತ್ತು ಎಂಬಾತನ ಮೇಲೆ ಹಲ್ಲೆ‌ ಮಾಡಿದ್ದ ಆರೋಪದ ಮೇಲೆ FIR ದಾಖಲು ಮಾಡಲಾಗಿದೆ. ಸರಗಳ್ಳತನ ಪ್ರಕರಣದಲ್ಲಿ ಅಮಾಯಕನನ್ನ ಕರೆತಂದು ಹಲ್ಲೆ ಮಾಡಿದ್ರಂತೆ. ಅಷ್ಟೇ ಅಲ್ಲ ಹಲ್ಲೆಯಿಂದ ರವಿ ಮೂತ್ರಪಿಂಡಗಳನ್ನೇ ಕಳೆದುಕೊಂಡಿದ್ದ‌. ಸದ್ಯ ಮುತ್ತು ಇಂದಿಗೂ ಕೂಡ ಶೋಚನೀಯ ಸ್ಥಿತಿಯಲ್ಲಿ‌ ಬದುಕು ನಡೆಸುತ್ತಿದ್ದಾನೆ. ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟದಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಮಾನವ ಹಕ್ಕು ಆಯೋಗದಿಂದ ಎರಡು ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿತ್ತು. ಈ ಕುರಿತು ಮುತ್ತು ಪರ ನಾಲ್ಕು ವರ್ಷದಿಂದ ಸ್ನೇಹಮಯಿ ಕೃಷ್ಣ ಹೋರಾಟ ನಡೆಸ್ತಾ ಇದ್ರು. ಹಲ್ಲೆ ಮಾಡಿದ್ದ ನಾಲ್ವರು ಪೊಲೀಸರ ವಿರುದ್ಧ ಅದೇ ಠಾಣೆಯಲ್ಲಿ ಸದ್ಯ ನ್ಯಾಯಾಲಯದ ಸೂಚನೆ ಮೇರೆಗೆ ಎಫ್‌ಐಆರ್ ಮಾಡಲಾಗಿದೆ.

Edited By : Vinayak Patil
PublicNext

PublicNext

29/12/2024 03:32 pm

Cinque Terre

35.5 K

Cinque Terre

1

ಸಂಬಂಧಿತ ಸುದ್ದಿ