ಮೈಸೂರು: ಮೈಸೂರಿನಲ್ಲಿ ಜಮೀನಿನ ವಿಚಾರಕ್ಕೆ ಮೂವರಿಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಹೆಚ್.ಡಿ.ಕೋಟೆಯಲ್ಲಿ 11 ಮಂದಿ ವಿರುದ್ಧ ಎಫ್ಐ ಆರ್ ದಾಖಲು ಮಾಡಲಾಗಿದೆ.
ಹಲ್ಲೆಗೊಳಗಾದವರು ತೀವ್ರ ರಕ್ತಸ್ರವಾದಿಂದ ನರಳಾಡಿದ್ದಾರೆ. ಕಬ್ಬಿಣದ ರಾಡ್ ನಿಂದಲೂ ಭೀಕರವಾಗಿ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ ಅನ್ನೋ ಮಾಹಿತಿ ಇದೆ. ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಅಂತ ತಿಳಿದು ಬಂದಿದೆ.
ಜಮೀನು ಮಾಲೀಕರಾದ ಬಸವರಾಜು, ಪ್ರದೀಪ್ ಗೆ ಗಂಭೀರ ಗಾಯ ಆಗಿದೆ. ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೂ ಜಮೀನಿಗೆ ನುಗ್ಗಿ ದಾಂಧಲೆ ಮಾಡಿದ್ದು ಸಣ್ಣಕುಮಾರ, ಬುದ್ದಿ, ಸೋಮೇಶ್, ಸಂಜು, ರವಿ,ಕುಮಾರ್, ಮುನಿಯಮ್ಮ, ದೊಡ್ಡಸಿದ್ದು, ರಾಜಶೇಖರ್, ಕವಿತಾ ವಿರುದ್ಧ ಪ್ರಕರಣ ದಾಖಲಾಗಿದೆ.
PublicNext
26/12/2024 07:26 pm