ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾನಾಪುರ: ಸಿಪಿಐ ಮಂಜುನಾಥ ನಾಯ್ಕ ಅಮಾನತಿಗೆ ಖಂಡನೆ, ರೈತ ಮುಖಂಡರಿಂದ ರಾಷ್ಟ್ರಪತಿಗಳಿಗೆ ಮನವಿ

ಖಾನಾಪುರ : ಬೆಳಗಾವಿ ಜಿಲ್ಲೆ ಖಾನಾಪೂರ ಪಟ್ಟಣದಲ್ಲಿ ಇಂದು ನೇಗಿಲು ಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ ಹಾಗೂ ಜೈ ಜವಾನ್ ಜೈ ಕಿಸಾನ್ ಸಂಘಟನೆ ಸಂಸ್ಥಾಪಕ ಗೋವಿಂದ ಪಾಟೀಲ ಅವರ ಮುಂದಾಳತ್ವದಲ್ಲಿ ನೂರಾರು ರೈತ ಮುಖಂಡರನ್ನೊಳಗೊಂಡು, ರಾಜಕೀಯ ದಾಳಕ್ಕೆ ಬಲಿಪಶುವಾದ ಪಿ ಐ ಮಂಜುನಾಥ ನಾಯ್ಕ ಅವರ ಅಮಾನತು ಖಂಡಿಸಿ ತಹಸೀಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ವರ್ಷ ಚಳಿಗಾಲದ ಅಧಿವೇಶನದಲ್ಲಿ 224 ವಿಧಾನ ಸಭೆ ಸದಸ್ಯರುಗಳ ಪೈಕಿ ಸುಮಾರು 60 ರಿಂದ 70 ಜನ ಮಾತ್ರ ಸದನದಲ್ಲಿ ಹಾಜರಿದ್ದು, ಇನ್ನುಳಿದವರು ನೆಪ ಮಾತ್ರಕ್ಕೆ 2 ರಿಂದ 3 ದಿನ ಭಾಗವಹಿಸಿ ತಮ್ಮ ಮೋಜು ಮಸ್ತಿಗಾಗಿ ಗೋವಾ ಹಾಗೂ ಇನ್ನಿತರ ಸ್ಥಳಗಳಲ್ಲಿ ಕಾಲಹರಣ ಮಾಡಿ ತಮ್ಮ ಊರುಗಳಿಗೆ ಹೋಗಿದ್ದಾರೆ. ಇದರಿಂದ ಸಾರ್ವಜನಿಕರ 25 ರಿಂದ 30 ಕೋಟಿ ತೆರಿಗೆ ಹಣ ವ್ಯಯ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದರೂ ಅದರ ಬಗ್ಗೆ ಚರ್ಚಿಸದೆ, ಬರೀ ಒಣ ರಾಜಕೀಯ ಕೆಸರೆರಚಾಟವೆಸಗಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ರು. ಅಸಂವಿಧಾನಿಕವಾಗಿ ಅಧಿವೇಶನ ನಡೆಸಿ ಖಾನಾಪೂರದಲ್ಲಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಅಚಾತುರ್ಯಕ್ಕೆ ಪಿ ಐ ಮಂಜುನಾಥ ನಾಯ್ಕ ಅವರನ್ನ ಬಲಿಪಶು ಮಾಡಿ ಅಮಾನತ್ತು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಈ ಕಾರಣ ಕೂಲಂಕುಷವಾಗಿ ತನಿಖೆ ಮಾಡಿ ಕೂಡಲೇ ಮಂಜುನಾಥ ನಾಯ್ಕ ಅವರ ಅಮಾನತ್ತು ರದ್ದುಪಡಿಸಿ ಸೇವೆಗೆ ನೇಮಕ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ನಾಗೇಶ್ ನಾಯ್ಕರ್, ಪಬ್ಲಿಕ್ ನೆಕ್ಸ್ಟ್, ಖಾನಾಪೂರ

Edited By : Suman K
Kshetra Samachara

Kshetra Samachara

31/12/2024 01:26 pm

Cinque Terre

23.74 K

Cinque Terre

0

ಸಂಬಂಧಿತ ಸುದ್ದಿ