ಹೊಸದುರ್ಗ : ಕುಟುಂಬಸ್ಥರೆಲ್ಲರೂ ಭಜನೆ ಪೂಜೆಗಳಲ್ಲಿ ಭಾಗವಹಿಸಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಅದಕ್ಕೆ ದೇವಸ್ಥಾನಗಳು ಸಾಕ್ಷಿಯಾಗಲಿವೆ ಎಂದು ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ.ಎಸ್ ತಿಳಿಸಿದರು.
ತಾಲ್ಲೂಕಿನ ಮತ್ತೋಡು ಹೋಬಳಿಯ ಅಗಸರಹಳ್ಳಿ ಗ್ರಾಮದ ಶ್ರೀ ಬವಾನಸಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ 3,50,000 ಡಿ.ಡಿ.ವಿತರಣೆ ಮಾಡಿ ಮಾತನಾಡಿದರು.
ಮನೆಯವರೆಲ್ಲರೂ ಪೂಜೆ,ಪ್ರಾರ್ಥನೆ ನಡೆಯುವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಭಾಗವಹಿಸಿದರೆ ಹಿರಿಯರು ದೇವಸ್ಥಾನಗಳ ಮಹತ್ವದ ಬಗ್ಗೆ ಹಿರಿಯರು ಕಿರಿಯರಿಗೆ ಭೋಧನೆ ಮಾಡಿದಾಗ ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಮೊಬೈಲ್,ಟಿವಿ ಹಾವಳಿ ಹೆಚ್ಚಾಗಿದ್ದು ಹಿರಿಯರು,ಕಿರಿಯರು ಒಟ್ಟಿಗೆ ಕೂತು ಪೂಜಾ ಕಾರ್ಯಕ್ರಮಗಳ ಸಂಭ್ರಮ ಪಡುವುದು ಕಡಿಮೆಯಾಗುತ್ತಿದೆ,ಇದರಿಂದ ಭವಿಷ್ಕಕ್ಕೆ ತೊಂದರೆಯಾಗುತ್ತದೆ.ಇದನ್ನು ತಪ್ಪಿಸಬೇಕಾದರೆ ಊರಿನ ಎಲ್ಲಾ ಹಿರಿಯರು ಕಿರಿಯರನ್ನು ಸೇರಿಸಿ ಹಿರಿಯರಿಂದ ಮಾರ್ಗದರ್ಶನ ಧರ್ಮ,ಧಾರ್ಮಿಕ ಆಚರಣೆ ಮತ್ತು ವೈಜ್ಞಾನಿಕ ಸತ್ಯತೆಗಳ ಬಗ್ಗೆ ಅರಿವನ್ನು ಮಾಡಿಸಬೇಕೆಂದು ತಿಳಿಸಿದರು.
Kshetra Samachara
31/12/2024 12:31 pm