ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಳೆದುಹೋಗಿದ್ದ 18 ಮೊಬೈಲ್ ಗಳು ವಾಪಸ್- ವಾರೀಸುದಾರರಿಗೆ ಖುಷ್

ಉಡುಪಿ: ಕಳೆದು ಹೋಗಿದ್ದ 18 ಮಂದಿಯ ಮೊಬೈಲ್ ಗಳನ್ನು ಪತ್ತೆ ಮಾಡಿರುವ ನಗರ ಪೊಲೀಸರು, ಸೋಮವಾರ ಆ ಮೊಬೈಲ್‌ ಗಳನ್ನು ವಾರೀಸುದಾರರಿಗೆ ಹಸ್ತಾಂತರಿಸಿದರು.

ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್ ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್ ಮೆಂಟ್ ರಿಜಿಸ್ಟ್ರರ್ (ಸಿಇಐಆರ್) ಮತ್ತು ಕೆಎಸ್ ಪಿ ಇ-ಲಾಸ್ಟ್ ನಲ್ಲಿ ದೂರು ದಾಖಲಿಸಿದ್ದರು. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಒಟ್ಟು 3,53,400 ರೂ. ಮೌಲ್ಯದ ಒಟ್ಟು 18 ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದ್ದು, ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಅವರು ವಾರೀಸುದಾರರಿಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಅವರು, ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದು, ಅದರ ಮಾಹಿತಿ ಸ್ಥಳೀಯ ಪೊಲೀಸ್ ಠಾಣೆಗೆ ಲಭ್ಯವಾಗುತ್ತದೆ. ಅವರ ದೂರಿನ ಅನ್ವಯ ಪೊಲೀಸರು ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.

ಮೊಬೈಲ್‌ ಫೋನ್ ಕಳೆದುಕೊಂಡವರಿಗೆ ಅವುಗಳನ್ನು ಹುಡುಕಿ ವಾಪಸ್ ಕೊಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಕಳೆದುಕೊಂಡ ಫೋನ್ ಸಿಗೋದೇ ಇಲ್ಲ ಎಂದು ಬೇಸರಗೊಂಡಿದ್ದ ವಾರೀಸುದಾರರು ಮರಳಿ ಪಡೆದದ್ದಕ್ಕೆ ಹರ್ಷ ವ್ಯಕ್ತ ಪಡಿಸಿದರು.

Edited By : Suman K
PublicNext

PublicNext

30/12/2024 04:57 pm

Cinque Terre

57.65 K

Cinque Terre

1

ಸಂಬಂಧಿತ ಸುದ್ದಿ