ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು-16 ತಿಂಗಳಲ್ಲಿ ಲಕ್ಷಾಂತರ ರೂ.ಮೌಲ್ಯದ 25ಕ್ಕೂ ಅಧಿಕ ಬ್ಯಾಟರಿಗಳ ಕಳವು

ಮೂಡುಬಿದಿರೆ: ಕಳೆದ 6 ತಿಂಗಳಿನಿಂದ ವಿವಿಧ ವಾಹನಗಳ 25ಕ್ಕೂ ಅಧಿಕ ಬ್ಯಾಟರಿಗಳ ಕಳ್ಳತನ ನಡೆದಿದೆ. ಮೂಡುಬಿದಿರೆ ವ್ಯಾಪ್ತಿಯಲ್ಲಿ ತಾಲೂಕು ನಡೆಯುವ ಕಾಮಗಾರಿಗಳಿಗೆ ಹಿಟಾಚಿ, ಜೆಸಿಬಿ, ಲಾರಿ ಹಾಗೂ ಟಿಪ್ಪರ್‌ಗಳನ್ನು ಬಳಸಲಾಗುತ್ತದೆ. ಮರುದಿನ ಅಲ್ಲೇ ಅಥವಾ ಅಕ್ಕಪಕ್ಕದಲ್ಲಿ ಕಾಮಗಾರಿ ನಡೆಯಬೇಕಾಗಿದ್ದರೆ ವಾಹನಗಳನ್ನು ಅಲ್ಲಿಯೇ, ನಿಲ್ಲಿಸಬೇಕಾಗುತ್ತದೆ. ಹೀಗೆ ನಿಲ್ಲಿಸಿ ಹೋದ ವಾಹನಗಳನ್ನು ಗುರುತಿಸುವ ಕಳ್ಳರು ಯಾರೂ ಇಲ್ಲದಾಗ ರಾತ್ರಿ ವೇಳೆಗೆ ಬಂದು ಬ್ಯಾಟರಿಗಳನ್ನು ಕದಿಯುತ್ತಿದ್ದಾರೆ. ಒಂದೇ ವಾಹನದಿಂದ ಹಲವು ಬಾರಿ ಬ್ಯಾಟರಿಗಳನ್ನು ಕದ್ದಿದ್ದೂ ಇದೆ.

ರೋಹನ್ ಕರ್ಡೋಜಾಅವರ ವಾಹನದಿಂದ 4 ಬ್ಯಾಟರಿ (37 ಸಾವಿರ ರೂ.), ರಂಜಿತ್ ಪೂಜಾರಿ ತೋಡಾರು ಅವರ ಟಿಪ್ಪರ್‌ನಿಂದ 3 ಬ್ಯಾಟರಿ (32 ಸಾವಿರ ರೂ.), ಭಟ್ರು ಪಡುಮೊಗರು ಅವರ 2 ಬ್ಯಾಟರಿ (30 ಸಾವಿರ ರೂ.), ಮ್ಯಾಕ್ಸಿ ವೆಲಂಕಣಿ ಬಸ್‌ನಿಂದ 4 (60 ಸಾವಿರ ರೂ.), ರಮಾ ಬೆಳುವಾಯಿ ಅವರ 1 (15 ಸಾವಿರ ರೂ.), ಜೆನೆಟ್ ಮೇರಿ 1 (15 ಸಾವಿರ ರೂ.), ಅಭಿಮಾನ್ 1 (15 ಸಾವಿರ ರೂ.), ಸ್ವಸ್ತಿಕ್ 1 (15 ಸಾವಿರ ರೂ.) ಹಾಗೂ ದಿವೈಶ್ 1 (15 ಸಾವಿರ ರೂ.) ಹೆಸರಿನ ವಾಹನಗಳಿಂದ ಸುಮಾರು 2.49 ಲಕ್ಷ ರೂ. ಬೆಲೆಬಾಳುವ ಬ್ಯಾಟರಿಗಳು ಕಳವಾಗಿದೆ. ಪೊಲೀಸರಿಗೆ ದೂರು ನೀಡಲಾಗಿದ್ದರೂ, ಸಿಸಿಟಿವಿಕೆಮರಾಗಳ ಪರಿಶೀಲನೆ ನಡೆಸಲಾಗಿದ್ದರೂ ಕಳ್ಳರ ಪತ್ತೆ ಕಾರ್ಯವಾಗಿಲ್ಲ.

Edited By : PublicNext Desk
Kshetra Samachara

Kshetra Samachara

02/01/2025 10:34 pm

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ