ಶಂಕರನಾರಾಯಣ : ಬೆಳ್ವೆ ಗ್ರಾಮದ ವನಜಲ ರೆಸಿಡೆನ್ಸಿ ಕಟ್ಟಡದ ರೂಮ್‌ನಲ್ಲಿ ಸಂಜೆ ವೇಳೆ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಹರೀಶ್, ಪ್ರಕಾಶ್, ಮಂದಾರ, ಸಿದ್ದಾರ್, ನಾಗರಾಜ್, ಮುಖೇಶ್, ಚಿರಾಗ್ ಬಂಧಿತ ಆರೋಪಿಗಳು. ಬಂಧಿತರಿಂದ 13700ರೂ. ನಗದು, 7 ಮೊಬೈಲ್ ಪೋನ್‌ಗಳು, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/01/2025 12:49 pm