ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ‌ ಐಷಾರಾಮಿ ಬಂಗಲೆಗೆ ದಾಳಿ- ಬರೋಬ್ಬರಿ 30ಲಕ್ಷ ಹಣದೊಂದಿಗೆ ತಂಡ ಪರಾರಿ

ಮಂಗಳೂರು: ನಗರದ ಬಂಟ್ವಾಳ ತಾಲೂಕಿನ ಬೋಳಂತೂರಿನ ನಾರ್ಶ ಎಂಬಲ್ಲಿನ ಐಷಾರಾಮಿ ಬಂಗಲೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಆಗಮಿಸಿದ ಆರು ಮಂದಿಯ ತಂಡ 25-30ಲಕ್ಷದವರೆಗೆ ನಗದಿನೊಂದಿಗೆ ಪರಾರಿಯಾದ ಘಟನೆ ಶುಕ್ರವಾರ ರಾತ್ರಿನಡೆದಿದೆ.

ನಾರ್ಸಾ ನಿವಾಸಿ ಸುಲೈಮಾನ್ ಎಂಬುವವರ ಐಷಾರಾಮಿ ಬಂಗಲೆಗೆ ಈ ದಾಳಿ ನಡೆದಿದೆ. ಬೀಡಿ ಉದ್ಯಮಿಯಾಗಿರುವ ಸುಲೈಮಾನ್ ಅವರು 80ಎಕರೆಯಷ್ಟು ಅಡಿಕೆ ತೋಟ ಹೊಂದಿರುವವರು‌. ದಾಳಿ ವೇಳೆ ಸುಲೈಮಾನ್, ಅವರ ಪತ್ನಿ, ಪುತ್ರ ಹಾಗೂ ಸೊಸೆ ಮಾತ್ರ ಮನೆಯಲ್ಲಿದ್ದರು.

ರಾತ್ರಿ 9ಗಂಟೆ ಸುಮಾರಿಗೆ ಕಾರಿನಲ್ಲಿ ಆಗಮಿಸಿದ ತಂಡ ತಮ್ಮನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ಪರಿಚಯಿಸಿದೆ. ಈ ವೇಳೆ ಐಡಿಯನ್ನೂ ತೋರಿಸಿ, ನಿಮ್ಮ ಮೇಲೆ ದೂರು ದಾಖಲಾಗಿದೆ. ಹಾಗಾಗಿ ಮನೆಯನ್ನು ಪರಿಶೀಲನೆ ಮಾಡಬೇಕೆಂದು ತಂಡ ಮನೆಯವರಿಗೆ ಸೂಚಿಸಿದೆ. ಬಳಿಕ ಮನೆಯನ್ನು ಪರಿಶೀಲನೆ ನಡೆಸುವ ರೀತಿಯಲ್ಲಿ ನಟಿಸಿ ಮನೆಯಲ್ಲಿದ್ದ 25-30ಲಕ್ಷ ನಗದು ಹಾಗೂ 4ಮೊಬೈಲ್‌ಗಳೊಂದಿಗೆ ಪರಾರಿಯಾಗಿದೆ.

ತಂಡ ಹೋದ ಬಳಿಕ ಮನೆಮಂದಿ ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ತಂಡ ಮನೆಯಲ್ಲಿದ್ದ ಚಿನ್ನಾಭರಣವನ್ನು ಕೊಂಡೊಯ್ಯದೆ ಬರೀ ನಗದು ದೋಚಿ ಪರಾರಿಯಾಗಿದೆ. ಅಡಿಕೆ ವ್ಯಾಪಾರದಿಂದ ಬಂದ ಹಣವನ್ನು ಮನೆಯಲ್ಲಿ ಇಡಲಾಗಿತ್ತು. ಬೀಡಿ ಉದ್ದಿಮೆಯ ಕಾರ್ಮಿಕರ ಶನಿವಾರ ಸಂಬಳ ನೀಡಲೆಂದು ತಂದ ಹಣ ಎಂದು ಮನೆಯವರು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

04/01/2025 05:29 pm

Cinque Terre

8.62 K

Cinque Terre

2

ಸಂಬಂಧಿತ ಸುದ್ದಿ