ಮಂಗಳೂರು: ನಗರದ ಪಣಂಬೂರು ಬೀಚ್‌ನಲ್ಲಿ ಮರಳು ಶಿಲ್ಪಿ ಪ್ರಸಾದ್ ಮೂಲ್ಯ ಸುರತ್ಕಲ್ ಅವರಿಂದ "ಹೊಸವರ್ಷದ ಸಂಭ್ರಮ"ದ ಸುಂದರ ಸ್ಯಾಂಡ್ ಆರ್ಟ್ ಮೂಡಿಬಂದಿದೆ.
ಈ ಮರಳುಶಿಲ್ಪ ರಚನೆಗೆ ಪ್ರಸಾದ್ ಮೂಲ್ಯ ಅವರಿಗೆ ಪ್ರಣಾಮ್ ದೇವಾಡಿಗ ಶಂಕರಪುರ ಹಾಗೂ ಚಂದ್ರಹಾಸ್ ಕುಲಾಲ್ ಸಹಕಾರ ನೀಡಿದ್ದಾರೆ. ನಾಲ್ಕು ಅಡಿ ಎತ್ತರ ಮತ್ತು ಎಂಟು ಅಡಿ ಎತ್ತರದ ತ್ರಿಕೋನ ಮಾದರಿಯ ಸುಂದರ ಮರಳುಶಿಲ್ಪ ರಚನೆಯಾಗಿದೆ.
ಬೆಳಗ್ಗೆ 11 ಗಂಟೆಗೆ ಮರಳುಶಿಲ್ಪ ರಚನೆಗೆ ತೊಡಗಿದ ಇವರು, ಸಂಜೆ 5.30ಕ್ಕೆ ಸಂಪೂರ್ಣಗೊಳಿಸಿದ್ದಾರೆ.
ಈ ಮರಳುಶಿಲ್ಪದ ಮುಂಭಾಗ 2025 ಹ್ಯಾಪಿ ನ್ಯೂ ಇಯರ್ ಎಂದು ಬರೆದು ಸ್ಮೈಲಿ ಇಮೋಜಿಯಿದ್ದರೆ, ಹಿಂಭಾಗದಲ್ಲಿ ಬಂಡೆಯ ಮಾದರಿಯನ್ನು ರಚಿಸಲಾಗಿದೆ. ಡಿಸೆಂಬರ್ 25ರಂದು ಇವರು ಇದೇ ಬೀಚ್‌ನಲ್ಲಿ ಸಾಂತಾ ಕ್ಲಾಸ್‌ನ ಮರಳುಶಿಲ್ಪ ರಚಿಸಿದ್ದರು.
PublicNext
02/01/2025 08:51 am