ಸುಳ್ಯ: ಗುತ್ತಿಗಾರ್ ಸಮೀಪದ ಕಮಿಲ ಎನ್ನುವಲ್ಲಿ ಯುವಕನೋರ್ವನ ಮೇಲೆನೆರೆಮನೆಯ ವ್ಯಕ್ತಿಯೋರ್ವರು ಕೋವಿ ತೋರಿಸಿ ಜೀವಬೆದರಿಕೆ ಹಾಕಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಿಲ ನಿವಾಸಿ ಪ್ರಜ್ವಲ್ ಟಿ.ಆರ್. ಅವರು ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಕರೆ ಮಾಡಿದ ಜಯರಾಮ ಅವರು ನಿಮ್ಮ ತಂದೆ ತುಪ್ಪದಮನೆ ಹೋಗುವ ರಸ್ತೆಗೆ ಸಂಬಂಧಿಸಿದ ದಾಖಲೆ ನೀಡುತ್ತಿಲ್ಲ ಎಂದು ಅವಾಚ್ಯವಾಗಿ ನಿಂದಿಸಿ ಮಾತನಾಡಿದ್ದಾಗಿ ಆರೋಪಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮರುದಿನ ಪ್ರಜ್ವಲ್ ಮನೆಗೆ ಬಂದಿದ್ದು, ಪುಚ್ಚಪ್ಪಾಡಿ ಬಸ್ ನಿಲ್ದಾಣದ ಬಳಿ ಇದ್ದ ಜಯರಾಮ ಅವರು ಕೋವಿ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಜ್ವಲ್ ದೂರು ದಾಖಲಿಸಿದ್ದಾರೆ.
Kshetra Samachara
02/01/2025 10:47 pm