ಚಿಕ್ಕಮಗಳೂರು : ಜಿಲ್ಲೆಯಲ್ಲಿ ನಿವೇಶನ ರಹಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಅದು ಕಳಸ ತಾಲೂಕಿನಲ್ಲಿಯೇ ಹೆಚ್ಚು. ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ಕಳೆದ ಎರಡು ದಶಕದ ಹಿಂದೆ ಮೋಟಮ್ಮ ಸಚಿವೆಯಾಗಿದ್ದಾಗ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಳಕೋಡು ಗ್ರಾಮದ 40 ನಿವೇಶನ ರಹಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನದ ಹಕ್ಕು ಪತ್ರವನ್ನು ನೀಡಲಾಗಿತ್ತು. ಆದರೆ ಈ 40 ಕುಟುಂಬದ ಸದಸ್ಯರು ಕಡು ಬಡವರಾಗಿರುವ ಕಾರಣ ಸ್ವಂತ ಮನೆ ನಿರ್ಮಿಸಿಕೊಳ್ಳಲು ಆಗದೇ ಸರ್ಕಾರದಿಂದ ಸಹಾಯವು ಸಿಗದೇ ನಿವೇಶನವನ್ನು ಹಾಳು ಬಿಟ್ಟಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ ನಿವೇಶನ ರಹಿತರಿಗೆ ಸರ್ಕಾರ ಮಂಜೂರು ಮಾಡಿದ್ದ 40 ಸೈಟ್ ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಈಗ ಪ್ರಶ್ನಿಸಲು ಹೋದರೆ ಇದು ನನ್ನ ಜಾಗ ಎಂದು ಉಡಾಫೆಯಾಗಿ ಉತ್ತರ ನೀಡುತ್ತಿದ್ದಾರಂತೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಯಾರೊಬ್ಬರೂ ತಲೆನೇ ಕೆಡಿಸಿಕೊಳ್ಳುತ್ತಿಲ್ಲ ಎಂದು ನಿವೇಶನ ರಹಿತರು ಅಳಲು ತೋಡಿಕೊಳ್ಳುತ್ತಿದ್ದಾರೆ.
PublicNext
30/12/2024 12:32 pm