ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಭತ್ತದ ಕೃಷಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಪ್ರಾತಿನಿಧ್ಯತೆ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ರೈತರು ಭತ್ತ ಕೃಷಿಯನ್ನು ಬಿಟ್ಟು ಮರದ ಮೇಲಿನ ಚಿನ್ನ ಅಡಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯ ರಾಜ ಕಾಫಿ, ನೆಲದೊಳಗಿನ ಹಣದ ಥೈಲಿ ಶುಂಠಿ, ಬೆಳೆಗಳ ಕಡೆಗೆ ಮುಖಮಾಡುತ್ತಿದ್ದಾರೆ. ಇದಕ್ಕೆ ಅತಿವೃಷ್ಟಿ, ಅನಾವೃಷ್ಟಿ, ಉತ್ಪಾದನಾ ವೆಚ್ಚ ಹೆಚ್ಚಳ, ಕಡಿಮೆ ಇಳುವರಿ, ಕಾರ್ಮಿಕರ ಸಮಸ್ಯೆ, ಕಾಡು ಪ್ರಾಣಿಗಳ ಉಪಟಳದಿಂದ ಭತ್ತದ ಕೃಷಿ ಮಲೆನಾಡಿನಲ್ಲಿ ನಿಧಾನವಾಗಿ ಮರೆಯಾಗುತ್ತಿದೆ. ಇದರ ನಡುವೆ ಭತ್ತದ ಕೃಷಿಗೆ ಪ್ರಾತಿನಿಧ್ಯತೆ ನೀಡುವ ಉದ್ದೇಶದಿಂದ ಕಳಸ ತಾಲೂಕಿನ ಕಾರ್ಗದ್ದೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ.ಸಿ ಟ್ರಸ್ಟ್, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಯಂತ್ರಶ್ರೀ ಕ್ಷೇತ್ರೋತ್ಸವ ಎಂಬ ಶೀರ್ಷಿಕೆಯಡಿ ರೈತರಿಗೆ ಭತ್ತದ ಕೃಷಿಯಲ್ಲಿ ಯಾಂತ್ರಿಕೃತ ಪದ್ಧತಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಕಳೆದ ಜುಲೈ ತಿಂಗಳಲ್ಲಿ ಯಾಂತ್ರಿಕೃತ ವಿಧಾನ ಹಾಗೂ ಕೈ ನಾಟಿ ಮೂಲ ಭತ್ತದ ಸಸಿಗಳನ್ನು ನಾಟಿ ಮಾಡಲಾಗಿತ್ತು. ಇದೀಗ ಭತ್ತದ ಫಸಲು ಕಟಾವಿಗೆ ಬಂದಿದ್ದು, ಎರಡು ವಿಧಾನದಲ್ಲಿ ನಾಟಿ ಮಾಡಿದ ಭತ್ತವನ್ನು ಕಟಾವು ಮಾಡಿ ಇಳುವರಿ ತಾಳೆ ಹಾಕಿದಾಗ ಯಾಂತ್ರಿಕೃತ ವಿಧಾನದಲ್ಲಿ ನಾಟಿ ಮಾಡಿದ್ದ ಭತ್ತದಲ್ಲಿ ಹೆಚ್ಚಿನ ಇಳುವರಿ ಬಂದಿದೆ. ಹೀಗಾಗಿ ಯಾಂತ್ರಿಕೃತ ವಿಧಾನದಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಭತ್ತವನ್ನು ಬೆಳೆಯಲು ಈ ಕಾರ್ಯಕ್ರಮದಡಿ ಅರಿವು ಮೂಡಿಸಲಾಗುತ್ತಿದೆ.

Edited By : Suman K
PublicNext

PublicNext

02/01/2025 01:28 pm

Cinque Terre

50.71 K

Cinque Terre

0

ಸಂಬಂಧಿತ ಸುದ್ದಿ