ಮೊಳಕಾಲ್ಮುರು: ಇತ್ತೀಚಿನ ದಿನಗಳಲ್ಲಿ ಮಾದಿಗ ಸಮುದಾಯದವರ ಮೇಲೆ ತಾಲೂಕಿನಲ್ಲಿ ಅನ್ಯ ಜನಾಂಗದವರು ದಬ್ಬಾಳಿಕೆ ನಡೆಸುತ್ತಿದ್ದೂ ನಮಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಮಾಜಿ ಪ.ಪಂ ಅಧ್ಯಕ್ಷರಾದ ಪ್ರಕಾಶ್ ಆರೋಪಿಸಿದ್ದಾರೆ.
ಮೊಳಕಾಲ್ಮುರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳ ಹಿಂದೆ ಬಿಜಿಕೆರೆ ಗ್ರಾಮದಲ್ಲಿ ಮಾದಿಗ ಜನಾಂಗದ ಮೇಲೆ ಅನ್ಯ ಸಮುದಾಯದವರು ದೌರ್ಜನ್ಯ ನಡೆಸಿದ್ದಾರೆ, ಇದಷ್ಟೇ ಅಲ್ಲದೇ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಾದಿಗ ಜನಾಂಗದ ಮೇಲೆ ಕಾರಣವಿಲ್ಲದೆ ದೌರ್ಜನ್ಯ ನಡೆಸುತ್ತಿದ್ದಾರೆ, ದೌರ್ಜನ್ಯಕ್ಕೆ ಒಳಗಾದವರು ನ್ಯಾಯ ನೀಡುವಂತೆ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ, ಆದ್ರೆ ಪೊಲೀಸರಿಂದ ನಮಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ,ತುಳಿತಕ್ಕೆ ಒಳಗಾದ ಜಾತಿಗೆ ನ್ಯಾಯ ಕಲ್ಪಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಬಿಜಿಕೆರೆಯಲ್ಲಿ ನಡೆದ ಗಲಾಟೆಯಲ್ಲಿ ಮಾದಿಗ ಜನಾಂಗದ ಹಲವು ಯುವಕರು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಪೊಲೀಸರು ನಮಗೆ ರಕ್ಷಣೆ ನೀಡುತ್ತಿಲ್ಲ, ಈಗಾಗಿ ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಕಲ್ ಇನ್ಸ್ಪೆಕ್ಟರ್ ವಸಂತ ಅಸೋದೆಯವರನ್ನು ಭೇಟಿ ಮಾಡಿದ್ದೇವೆ, ಸಿಪಿಐ ವಸಂತ ಆಸೋದೆ ನಮಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಜಾಗೃತೆ ವಹಿಸುತ್ತದೆ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ ಹಾಗಾಗಿ ಪ್ರತಿಭಟನೆಯಿಂದ ನಾವು ವಾಪಾಸ್ ಸರಿದಿದ್ದೇವೆ,ಇದೇ ರೀತಿ ಏನಾದರೂ ಮಾದಿಗ ಜನಾಂಗದವರ ಮೇಲೆ ಅನ್ಯಾಯವಾದರೆ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದರು.
ಸ್ಥಳದಲ್ಲಿ ಬಿಜಿಕೆರೆ ಗ್ರಾಪಂ ಅಧ್ಯಕ್ಷರಾದ ಮೊಗಲಹಳ್ಳಿ ಜಯಣ್ಣ, ಡಿಎಸ್ ಎಸ್ ರಾಜ್ಯ ಸಮಿತಿ ಸದಸ್ಯರಾದ ಜಯಣ್ಣ ಸೇರಿದಂತೆ ದಲಿತ ಮುಖಂಡರು ಇದ್ದರು.
Kshetra Samachara
29/12/2024 04:16 pm