ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶೋಕಾಚರಣೆ ನಡುವೆಯೂ 6ನೇ ವರ್ಷದ ಹನುಮ ಜಯಂತ್ಯುತ್ಸವ ಜರುಗಿತು. ಮೆರವಣಿಗೆಗೆ ಆದಿ ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಶ್ರೀಗಳು, ಜಿಟಿಡಿ, ರಾಜೀವ್ ಸೇರಿ ಹಲವು ಗಣ್ಯರು ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದ್ರು.
ಮೈಸೂರು ಅರಮನೆಯ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಾಗಿದವು. ವಿಶೇಷ ಅಂದ್ರೆ ಎಂದಿನಂತೆ ವಿವಿಧ ಬಡಾವಣೆಗಳಿಂದ ಬಂದ ಹನುಮ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗಿದವು. ಈ ವೇಳೆ ಎಲ್ಲೆಲ್ಲೂ ಜೈ ಶ್ರೀರಾಮ್...ಜೈ ಭಜರಂಗ್ ಬಲಿ... ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
PublicNext
28/12/2024 09:23 pm