ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡಿದ್ದು, 1.23 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.
ಒಂದು ತಿಂಗಳ ಅವಧಿಯಲ್ಲಿ 23 ಹುಂಡಿಗಳ ಎಣಿಕೆಯಲ್ಲಿ 1,23,59,270 ರೂಪಾಯಿ ಸಂಗ್ರಹವಾಗಿದೆ. ಜತೆಗೆ 128 ಗ್ರಾಂ 800 ಮಿಲಿ ಗ್ರಾಂ ಕೆ.ಜಿ.ಚಿನ್ನ, 1 ಕೆಜಿ 780 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಈ ಬಾರಿ ನಂಜುಂಡೇಶ್ವರನಿಗೆ ವಿದೇಶಿ ಕರೆನ್ಸಿ ದೊರೆತಿದ್ದು, ಅಮೆರಿಕ ದೇಶದಿಂದ 429, ಇಂಗ್ಲೆಂಡ್ 10, ಕೆನಡಾ 15, ಹಾಂಕಾಂಗ್ 80 ಕರೆನ್ಸಿ ಕಾಣಿಕೆಯಾಗಿ ಬಂದಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಅಧಿಕಾರಿ ವೆಂಕಟೇಶ್ ಪ್ರಸಾದ್, ವಿದ್ಯುಲತಾ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.
PublicNext
27/12/2024 10:00 am