ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಟ ಧರ್ಮಾಗೂ ವಂಚಿಸಿದ್ಳಾ ಐಶ್ವರ್ಯ? ವನಿತಾ, ಧರ್ಮಾ ಆಡಿಯೋ ವೈರಲ್

ಬೆಂಗಳೂರು: ಐಶ್ವರ್ಯ ಗೌಡಳಿಂದ ವರಾಹಿ ಜ್ಯುವೆಲ್ಲರ್ಸ್ ಮಾಲೀಕರಿಗೆ ವಂಚನೆ ಕೇಸ್ ನಲ್ಲಿ ಮತ್ತೊಂದು ಆಡಿಯೋ ವೈರಲ್ ಆಗಿದೆ. ನಟ ಧರ್ಮೇಂದ್ರನಿಗೂ ಐಶ್ವರ್ಯ ಗೌಡ ವಂಚಿಸಿದ್ದಲ್ಲದೇ, ಅವಾಜ್ ಹಾಕ್ತಾಳಂತೆ. ಪೊಲೀಸರಿಂದಲೇ ನಟ ಧರ್ಮೇಂದ್ರನಿಗೆ ಕರೆ ಮಾಡಿಸ್ತಾಳಂತೆ ಐಶ್ವರ್ಯಗೌಡ. ವರಾಹಿ ಜ್ಯುವೆಲ್ಲರ್ಸ್ ಮಾಲಕಿ ವನಿತಾ ಐತಾಳ್ ಬಳಿ ನಟ ಧರ್ಮೇಂದ್ರ ಮಾತಾಡಿರೋ ಸ್ಫೋಟಕ ಆಡಿಯೋ ವೈರಲ್ ಆಗಿದೆ.

ಆಡಿಯೋ ಸಂಭಾಷಣೆ ಏನಿದೆ? ಅಂತ ನೋಡೋದಾದ್ರೆ...

ಏನ್ ಆರಾಮಾಗಿದಾರೆ.

ವರಾಹಿಗೆ ಏನ್ ಮಾಡಿದ್ಲು.

ಇನ್ನು ನಿಮಗೆ ದುಡ್ಡು ಬಂದಿಲ್ಲ ಅನ್ನೋದು ಈವಾಗ್ಲೇ ಗೊತ್ತಾಗಿದ್ದು ನನಗೆ. ಜುಲೈ ತನಕ ಟೈಂ ತಗೊಂಡ್ಲು.

ಆಮೇಲೆ ಸೆಪ್ಟೆಂಬರ್ ಗಣೇಶ ಹಬ್ಬದ ವರೆಗೂ ಟೈಂ ತಗೊಂಡ್ಲು.

ನಿಮಗೂ ಗೊತ್ತಿದೆ ನನಗೆ ಎಷ್ಟು ದುಡ್ಡು ಕೊಡ್ಬೇಕು ಅಂತ

ಹಾ ಗೊತ್ತು ಬಿಡಿ...

ನಿಮಗೂ ಹೇಳಿದಿನೋ ಇಲ್ವೋ..!?

ಹೌದಪ್ಪ ನಿಮಗ್ ಕೊಡ್ಬೇಕು.

ನಾನೇ ಮಾತಾಡಿದಿನಿ. ನಾನೇ ಸಾಕ್ಷಿ ಇದೀನಿ. ಮನೆ ಹತ್ರ ಬಂದು ಅಣ್ಣಮ್ಮಗೆ ಎಷ್ಟೋ ಜ್ಯುವೆಲ್ಸ್ ಕೊಟ್ಟಿದಿರ..?

ಡಿ.ಕೆ.ಸುರೇಶ್ ಗೆ ಎಲೆಕ್ಷನ್ ಇದೆ ಹಂಗಿದೆ ಹಿಂಗಿದೆ ಅಂತ ತಗೊಂಡಿದ್ದು...?

ಏನೇನೋ ತಗೊಂಡಿದಾಳೆ ಬಿಡಿ. ಅದಂತೂ ನಿಜಾ. ನೀವು ತುಂಬಾ ನಂಬಿ ಕೊಟ್ರಿ.

ನೀವು ಫೋನ್ ಮಾಡಿ ಸುರೇಶ್ ನೆಪದಲ್ಲಿ ಟೈಂ ಕೊಡು ಅಂತ ಹೇಳ್ಸಿದಾಳ ಇಲ್ವಾ...!?

ಅದು ನಿಜಾ

ಅವಳು ಏನು ಮಾಡಿದಾಳೆ ಅದು ಹೇಳಿ.

ನೀವು ಈ ಥರ ಮಾಡಿ ವನಿತಾ ಅವ್ರೆ.. ನಾನು 24 ಘಂಟೆ ಅವರ ಮನೆಗೆ ಬಂದು ಕೂತ್ಕಿಳ್ತಿನಿ.

ನಮಗೆ ಗೊತ್ತಿಲ್ಲ ಇಷ್ಟೆಲ್ಲ ಮಾಡಿದಾಳೆ ಕಚಡಾ..

ನಮಗೆ ಪೊಲೀಸ್ ಸ್ಟೇಷನ್ ನಿಂದೆಲ್ಲ ಪೋನ್ ಮಾಡಿಸೋದು.

ಇದೆಲ್ಲ ಮಾಡ್ತಾಳೆ.

ಹೋಗ್ಲಿ ಆಯ್ತು, ನಿಮ್ಮ ದುಡ್ಡು ಬಂತಾ..!?

ನಮ್ ತಾಯಿ ಆಣೆ. ದುಡ್ಡಿರ್ಲಿ ಎಂತೆಂಥಾ ಮಾತಾಡಿಸಿದ್ದಾಳೆ ಗೊತ್ತಾ..!?

ಏನೋಲೆ.. ಏನೋ ಮಾಡ್ತಿಯಾ.. ತಾಖತ್ ಇದ್ಯಾ..? ಬಾರೋ ಮನೆಗೆ

ಏನ್ ಮಾತುಗಳು ಹೋಗೋ ಬಾರೋ ಅನಿಸ್ಕೊಂಡು ನಾವು..!

ಏನ್ ಬ್ಯಾಕಪ್ ಇದೆ ಅವಳಿಗೆ ಧರ್ಮ..!?

ನಮ್ ತಾಯಾಣೆಗೂ ನೀವೇ ಹೇಳ್ಬೇಕು...

ನಿಮಗೆ ಯಾವಾತ್ತಿಂದ ಪರಿಚಯನೋ ನಿಮಗ್ ಗೊತ್ತು..

ನೀವು ಬಂದು ಒಂದು ದಿನ ಹೊಗಳಿದ್ರಲ್ವಾ, ಧರ್ಮ ಕೇಪಬಲ್ ಅಂತ. ಅವತ್ತಿಂದಾನೇ ನಾನು ಫುಲ್ ಗೂಬೆ ಆಗಿದ್ದು...!

ಸುಮ್ನೆ ಇರಿ, ನೀವು ಫಸ್ಟ್ ನನಗ್ ಫೋನ್ ಮಾಡ್ಬಿಟ್ಟು ಅವಳ ಜೊತೆ ಶೂಟಿಂಗ್ ಎಲ್ಲ ಚೆನ್ನಾಗಿ ಓಡಾಡಿಬಿಟ್ಟು ನನ್ನತ್ರ ಬಂದು ಗೋಲ್ಡು ತಗೊಂಡು ಕಾರು ಅವಳದ್ದು ಓಡಿಸಿ ನೀವೇನಂದ್ರಿ ಧರ್ಮ ಒಂದ್ ನಿಮಿಷ ಕೇಳಿ.

ನಿಮಗೆ ಅವಳಿಂದ ಅನ್ಯಾಯ ಆಗಿದ್ಯಾ ಇಲ್ವಾ ಧರ್ಮ..?

ಆಗಿಲ್ಲ ಅಂದ್ರೆ ಬಿಡ್ತಿದ್ನಾ..?

ಅನ್ಯಾಯ ಆಗಿದೆ ತಾನೇ, ಅದೇ‌ ಥರ ನನಗೂ ಅನ್ಯಾಯ ಆಗಿದೆ ಅಲ್ವಾ ಧರ್ಮ..?

ಅವಳು ಏನಿಕ್ಕೆ ನಿಮ್ಮಿಂದ ಪೋನ್ ಮಾಡಿಸಬೇಕಿತ್ತು.

ನಿಮಗೆ ಆವಾಗಾದ್ರೂ ಗೊತ್ತಾಗಲಿಲ್ವಾ.

ಯಾಕಮ್ಮ ಹೀಗೆ ಮಾಡ್ತಿದ್ಯಾ ಅಂತ ಕೇಳ್ಬೇಕಿತ್ತು ತಾನೆ..?

ಒಂದು ನಿಮಿಷ ಇರಿ.

ನನಗೆ ಡಿ.ಕೆ.ಸುರೇಶ್ ಫೋನ್ ಮಾಡಿದಾರಲ್ವ. ಅಂದ್ರೆ ನನಗೂ ಇದೇ ಥರ ಇನ್ನೊಬ್ರು ಕೈನಲ್ಲಿ‌ ಮಿಮಿಕ್ರಿ ಮಾಡಿ ಮಾತಾಡಿಸಿದಾಳಲ್ವ.

ಏನಂಥಾ ಮಾತಾಡಿಸಿದ್ದಾಳೆ..?

ಧರ್ಮ ಏನಪ್ಪ..?

ಜ್ಯುವೆಲ್ಲರಿ ಶಾಪ್‌ ಒಂದಕ್ಕೆ ಅವರು ಎದುರಿಗೆ ಬಂದಾಗ ಮಾತಾಡಿಸಲಿಲ್ಲ.

ನನಗೆ ಅವಾಗ್ಲೇ ಡೌಟ್ ಬಂತು.

ಅವಾಗ ನನ್ನ ಎದುರಿಗೆ ಕೂರ್ಸು ಮಾತಾಡಿಸು ಅಂತ ಕೂತ್ಕೊಂಡೆ.

ಅವಾಗಿಂದ ಅವಳಿಗೆ ಬಾಯಿಲ್ಲ ಅರ್ಥ ಆಯ್ತಾ. ಅವತ್ತೇ ಲಾಸ್ಟು ಕಿತ್ತಾಕಿ ಬಿಸಾಕಿದಿನಿ ಅವಳನ್ನ.

ಧರ್ಮ ಅವರೇ ಒಂದ್ ಮಾತ್ ಹೇಳ್ತಿನಿ ಗೊತ್ತಾ.

ಇವತ್ತು ನೀವು ಫ್ರೀ ಇದ್ರೆ ಬನ್ನಿ. ನಾನು ನಿಮ್ಮ ಜೊತೆ ಎನಿಟೈಂ ಇರ್ತೀನಿ.

ಈವಾಗ ನೀವು ಅವಳಿಗೆ ಪೋನ್ ಮಾಡಿ ಇನ್ಫರ್ಮೇಷನ್ ಹೇಳಿ ಅಧ್ವಾನ ಮಾಡೋ ಬದ್ಲು ಬಂದು ನಿಜಾ ಹೇಳಿ. ನಾನೇನು ನಿಮಗೆ ಸುಳ್ಳು ಹೇಳ್ತಿಲ್ಲ.

ನಿಜಾ ಹೇಳೋಕ್ ಏನಿದೆ..? ಇಷ್ಟೇ ಇರೋದು...!

ನಿಜ ಏನ್ ಹೇಳ್ತಿರಾ ನಿಜಾ

ಡಿ.ಕೆ.ಸುರೇಶ್ ಅಂತ ನೀವ್ ನನಗೆ ಫೋನ್ ಮಾಡಿ ಟೈಂ ತಗೊಂಡ್ರಿ ಕರೆಕ್ಟಾ..

ಹೌದು, ಅಷ್ಟೇ ನಾನ್ ಮಾಡಿರೋದು...!

Edited By : Vinayak Patil
PublicNext

PublicNext

28/12/2024 08:51 pm

Cinque Terre

42.94 K

Cinque Terre

0