ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನ್ಯೂ ಇಯರ್ ಗೆ ಡಿಸಿಎಂ ವಾರ್ನಿಂಗ್

ಬೆಂಗಳೂರು: ಹೊಸ ವರ್ಷಾಚರಣೆಯ ಸಿದ್ಧತೆ, ಸೆಕ್ಯೂರಿಟಿ ವಿಚಾರ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಹೊಸ ವರ್ಷದ ತಯಾರಿ ಬಗ್ಗೆ ಮಾಧ್ಯಮದವರು ಕೇಳಿದಾಗ, ಇದನ್ನು ಎಚ್ಚರಿಕೆ ಅಂತನಾದ್ರೂ ತಿಳಿದುಕೊಳ್ಳಿ, ಮನವಿ ಅಂತನಾದ್ರೂ ತಿಳಿದುಕೊಳ್ಳಿ. ಆದ್ರೆ ನಿಯಮಗಳಿಗೆ ಅನುಸಾರ ಹೊಸವರ್ಷದ ಆಚರಣೆ ಮಾಡಿ ಅಂತ ಕರೆ ಕೊಟ್ಟಿದ್ದಾರೆ.

ಇನ್ನು, ಇದೇ ವೇಳೆ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಏಳು ದಿನಗಳ ಶೋಕಾಚರಣೆ ಬಗ್ಗೆ ಕೂಡ ಡಿಸಿಎಂ ಮಾತನಾಡಿದ್ದಾರೆ. ಇದು ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ ‌ಮಾತ್ರ ಅನ್ವಯ ಆಗುತ್ತದೆ. ಖಾಸಗಿ ಕಾರ್ಯಕ್ರಮಗಳನ್ನು ನಿಯಮಗಳಿಗೆ ಅನುಸಾರ ಮಾಡಿಕೊಳ್ಳಿ.

ಹೋಟೆಲ್, ರೆಸಾರ್ಟ್ ನವರು ಸರ್ಕಾರದ ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ. ನಾವು ಬ್ಯುಸಿನೆಸ್ ಮಾಡುವವರಿಗೂ ಅಡ್ಡಿ ಪಡಿಸಲು ಆಗಲ್ಲ. ಬೆಂಗಳೂರಿನಾದ್ಯಂತ ಹತ್ತು ಸಾವಿರ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಎಚ್ಚರಿಕೆಯಿಂದ ಹೊಸ ವರ್ಷದ ಆಚರಣೆ ಮಾಡಿ ಅಂತ ಡಿಸಿಎಂ ತಿಳಿಸಿದ್ದಾರೆ.

Edited By : Vinayak Patil
PublicNext

PublicNext

29/12/2024 06:17 pm

Cinque Terre

49.04 K

Cinque Terre

0

ಸಂಬಂಧಿತ ಸುದ್ದಿ