ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಾಮಾಣಿಕ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಈ ಸರ್ಕಾರ ಕೊಟ್ಟಿದೆ- ಸಿ.ಟಿ.ರವಿ

ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಿಷತ್ ಸದಸ್ಯ ಸಿ.ಟಿ. ರವಿ, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಹೇಳ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯ್ತು. ಅವರ ಸಾಧನೆ ಅಂದ್ರೆ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ.

ಎಷ್ಟರಮಟ್ಟಿಗೆ ಅಂದ್ರೆ ಬೆಂಗಳೂರಿನಲ್ಲಿ ಪ್ಲ್ಯಾನ್ ಸ್ಯಾಂಕ್ಷನ್ ಗೆ ಚದರಡಿಗೆ ನೂರು ರೂ. ಕೊಡಬೇಕು. ಮುಡಾ, ವಾಲ್ಮೀಕಿ, ಅಬಕಾರಿ ಇಲಾಖೆ ಹಗರಣಗಳಾದವು. ಆರೋಗ್ಯ ಖಾತೆಗೆ ಅನಾರೋಗ್ಯ ಬಡಿದಿದೆ. ಬಾಣಂತಿಯರ, ಶಿಶುಗಳ ಸರಣಿ ಸಾವು ನಿಂತಿಲ್ಲ. ಜೀವರಕ್ಷಕ ಔಷಧಗಳೇ ಕಳಪೆ, ಇದು ಆಘಾತಕಾರಿ ವಿಚಾರ. ಪ್ರಾಮಾಣಿಕ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಈ ಸರ್ಕಾರ ಕೊಟ್ಟಿದೆ. ಅಧಿಕಾರಿಗಳು, ಸರ್ಕಾರಿ ನೌಕರರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

01/01/2025 07:52 pm

Cinque Terre

106.4 K

Cinque Terre

1